ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ – ರಾಯರ ದರ್ಶನ ಪಡೆದು ವಾಪಸ್ಸಾಗ್ತಿದ್ದ ಇಬ್ಬರು ಸಾವು

Public TV
1 Min Read

ಬಳ್ಳಾರಿ: ರಸ್ತೆ ಬದಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರುಗುಪ್ಪ (Siraguppa) ತಾಲೂಕಿನ ಬೈರಾಪುರ ಕ್ರಾಸ್ (Bairapura Cross) ಬಳಿ ನಡೆದಿದೆ.

ಮಂಡ್ಯ (Mandya) ಮೂಲದ ಶ್ವೇತಾ(38), ಕನಕಪುರ (Kanakapura) ಮೂಲದ ಬಾಲನಾಯಕ(42) ಮೃತರು. ಘಟನೆಯಲ್ಲಿ 10ಕ್ಕೂಜ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

ಮೃತರಿಬ್ಬರು ಮಂತ್ರಾಲಯ (Mantralaya) ರಾಯರ ದರ್ಶನಕ್ಕೆ ಬಂದಿದ್ದರು. ರಾಯರ ದರ್ಶನ ಮುಗಿಸಿ ಮಸ್ಕಿಯಿಂದ (Maski) ಬೆಂಗಳೂರಿಗೆ (Bengaluru) ಸರ್ಕಾರಿ ಬಸ್ಸಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಗಾಯಾಳುಗಳನ್ನು ಸಿರುಗುಪ್ಪ ತಾಲೂಕಾಸ್ಪತ್ರೆ ಹಾಗೂ ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ.ಶೋಭಾರಾಣಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

Share This Article