ಗೌತಮಿ ದಂಪತಿ ಜೊತೆ ಕುಟುಂಬ ಸಮೇತ ಉಗ್ರಂ ಮಂಜು ಟೆಂಪಲ್ ರನ್

Public TV
1 Min Read

‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಅದ್ಧೂರಿಯಾಗಿ ತೆರೆಬಿದ್ದಿದೆ. ಶೋ ಮುಗಿದು ಹಲವು ದಿನಗಳು ಕಳೆದಿದೆ. ಹೀಗಿರುವಾಗ ದೊಡ್ಮನೆ ಆಟದ ನಂತರವೂ ಗೌತಮಿ, ಉಗ್ರಂ ಮಂಜು ಗೆಳೆತನ ಮುಂದುವರೆದಿದೆ. ಗೌತಮಿ (Gouthami) ಕುಟುಂಬದಲ್ಲಿ ಮಂಜು ಒಬ್ಬರಾಗಿದ್ದಾರೆ. ಸದ್ಯ ಗೌತಮಿ ದಂಪತಿ ಜೊತೆ ಶ್ರೀ ವನದುರ್ಗಾ ದೇವಾಲಯಕ್ಕೆ (Vanadurga Temple) ಉಗ್ರಂ ಮಂಜು ಕೂಡ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಐಶ್ವರ್ಯ ರೈ ಕಾರಿಗೆ ಬಸ್‌ ಡಿಕ್ಕಿ – ನಟಿ ಸೇಫ್‌

ಬಿಗ್ ಬಾಸ್‌ನಲ್ಲಿ (Bigg Boss) ಶುರುವಿನಲ್ಲಿ ಗೌತಮಿ, ಮಂಜು ಗೆಳೆತನ ಚೆನ್ನಾಗಿತ್ತು. ಆ ನಂತರ ಗೌತಮಿ ಮತ್ತು ಮಂಜು (Ugramm Manju) ನಡುವೆ ಬಿರುಕು ಮೂಡಿತ್ತು. ಇಬ್ಬರ ಜಿದ್ದಾಜಿದ್ದಿ ಫಿನಾಲೆವರೆಗೂ ಮುಂದುವರೆದಿತ್ತು. ಶೋ ಮುಗಿದ ಬಳಿಕ ಇಬ್ಬರ ನಡುವಿನ ಸ್ನೇಹ ಮತ್ತೆ ಗಟ್ಟಿಯಾಗಿದೆ. ಆಗಾಗ ಗೌತಮಿ ದಂಪತಿಯನ್ನು ಉಗ್ರಂ ಮಂಜು ಭೇಟಿಯಾಗುತ್ತಿರುತ್ತಾರೆ. ಇದನ್ನೂ ಓದಿ:ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

 

View this post on Instagram

 

A post shared by Max manju (@maxmanju_official)

ಗೌತಮಿ ಅವರು ವನದುರ್ಗಾ ದೇವಿಯನ್ನು ಅಪಾರವಾಗಿ ನಂಬುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವನದುರ್ಗಾ ದೇವಾಲಯ ಇದೆ. ಇಲ್ಲಿಗೆ ಅವರು ಅನೇಕ ಬಾರಿ ಭೇಟಿ ಕೊಟ್ಟಿದ್ದರು. ಈಗ ಮಂಜು ಫ್ಯಾಮಿಲಿ ಹಾಗೂ ಗೌತಮಿ ದಂಪತಿ ಒಟ್ಟಾಗಿ ಈ ದೇವಾಲಯಕ್ಕೆ ತೆರಳಿದ್ದಾರೆ. ಶೋ ಮುಗಿದ ಮೇಲೆಯೂ ಇವರ ಬಾಂಧವ್ಯ ನೋಡಿ ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನೂ ‘ಬಿಗ್ ಬಾಸ್’ ಮತ್ತು ‘ಮ್ಯಾಕ್ಸ್’ ಸಿನಿಮಾದ ಸಕ್ಸಸ್ ಬಳಿಕ ಉಗ್ರಂ ಮಂಜು ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗೌತಮಿ ಉತ್ತಮ ಪ್ರಾಜೆಕ್ಟ್‌ಗಳಿಗಾಗಿ ಎದುರು ನೋಡ್ತಿದ್ದಾರೆ.

Share This Article