ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

Public TV
1 Min Read

– 2 ಲಕ್ಷ, ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ತಿಳಿಸಿದ್ದ ಕೋರ್ಟ್
– ಜೈಲಲ್ಲೇ ಇರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಮೂವರು ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಕೋರ್ಟ್ ಜಾಮೀನು (Bail) ನೀಡಿದ್ದರೂ ಬೆಲ್ ಶೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ.

ಕಳೆದ ಸೋಮವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು.ಇದನ್ನೂ ಓದಿ: ನಂಬಿಕೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಿಸಿದ್ರೆ ನಮಗೂ ಸಂತೋಷ: ಯದುವೀರ್

ಜಾಮೀನು ಸಿಕ್ಕಿ 5 ದಿನ ಕಳೆದರೂ ಆರೋಪಿಗಳಿಗೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ದೊರೆತಿಲ್ಲ. 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನು ಒಪ್ಪಿಸುವಂತೆ ಕೋರ್ಟ್ ತಿಳಿಸಿದೆ. ಜಾಮೀನು ನೀಡಲು ಶೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಡುವಂತಾಗಿದೆ. ಹೀಗಾಗಿ ಆರೋಪಿಗಳು ಇನ್ನೂ ತುಮಕೂರು ಜಿಲ್ಲಾ (Tumakuru Jail) ಕಾರಾಗೃಹದಲ್ಲಿದ್ದಾರೆ.

ಕಳೆದ 6 ದಿನಗಳಿಂದ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಇನ್ನು ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆ ಇಂದು ಕೂಡಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನವಾಗಿದೆ. ಶೂರಿಟಿದಾರರನ್ನ ಹೊಂದಿಸಲು ಸಾಧ್ಯವಾಗದ ಕಾರಣ ಆರೋಪಿಗಳ ಕುಟುಂಬಸ್ಥರು ಇಲ್ಲಿಯ ತನಕ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

Share This Article