ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

Public TV
2 Min Read

ಬಾಲಿವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಗುವಿನ ಆಗಮನಕ್ಕಾಗಿ ದಂಪತಿ ಕಾಯುತ್ತಿದ್ದಾರೆ. ಇದರ ನಡುವೆ ಬೇಬಿ ಬಂಪ್‌ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌ ನೀಡಿದ್ದಾರೆ. ಕ್ಯೂಟ್‌ ಕಪಲ್‌ ಎಂದೇ ಕರೆಸಿಕೊಂಡಿರುವ ಈ ಜೋಡಿಯ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮೊದಲ ಮಗುವಿನ ಆಗಮನಕ್ಕೆ ಮುನ್ನ ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಫೋಟೋಶೂಟ್‌ (Photo Shoot) ಮಾಡಿಸಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಮ್ಮನಾಗುವ ಖುಷಿಯಲ್ಲಿ ತನ್ನ ಸುಂದರ ಬೇಬಿ ಬಂಪ್‌ ಅನ್ನು ತೋರಿಸಿದ್ದಾರೆ.

ಇನ್ನು ಕೆಲವು ಫೋಟೋಗಳಲ್ಲಿ ದೀಪಿಕಾ ಮತ್ತು ರಣವೀರ್‌ ಸಿಂಗ್‌ (Ranveer Singh) ಆಪ್ತ ಕ್ಷಣಗಳಲ್ಲಿ ಇರುವಂತೆ ಕಾಣಿಸಿದ್ದಾರೆ. ಒಟ್ಟಾರೆ ಇಬ್ಬರ ಮುಖದಲ್ಲಿ ನಗು, ಖುಷಿ ತುಂಬಿ ತುಳುಕುತ್ತಿದೆ. ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ದೀಪಿಕಾ – ರಣವೀರ್‌ ಅಭಿಮಾನಿಗಳು ತಮ್ಮ ಸ್ಟೇಟಸ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಒಂದು ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಲವು ಉಡುಗೆಗಳನ್ನು ಹಿಡಿದುಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಜೀನ್ಸ್‌ ಮತ್ತು ಲಾಸಿ ಬ್ರಾ ಧರಿಸಿ, ಲೇಡಿ ಬಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗಲಿ, ಸಿಗದೇ ಇರಲಿ ಪಕ್ಷದ ಜೊತೆ ಇರ್ತೇನೆ, ಜೆಡಿಎಸ್‌ಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ: ಸಿಪಿವೈ

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಕಳೆದ ಫೆಬ್ರವರಿ 29ರಂದು ಹಂಚಿಕೊಂಡಿದ್ದರು. ಹಾಗಾಗಿ ಸೆಪ್ಟೆಂಬರ್‌ ತಿಂಗಳಾಂತ್ಯದ ವೇಳೆಗೆ ಮೊದಲ ಮಗುವಿನ ಆಗಮನವಾಗುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

ಸೌತ್‌ ಬಾಂಬೆಯಲ್ಲೇ ಹೆರಿಗೆ: 
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಹೆರಿಗೆಗಾಗಿ ಲಂಡನ್‌ಗೆ (London) ಹೋಗ್ತಾರೆ ಅಂತಾ ಸುದ್ದಿ ಹರಿದಾಡ್ತಿತ್ತು. ಆದ್ರೆ, ಈ ಸುದ್ದಿ ಸುಳ್ಳು, ಸೌತ್ ಬಾಂಬೆಯಲ್ಲೇ ಹೆರಿಗೆ ಮಾಡಿಕೊಳ್ಳುತ್ತಿದ್ದಾರಂತೆ ದೀಪಿಕಾ. ಜೊತೆಗೆ ತಾಯಿತನದ ಕ್ಷಣವನ್ನ ಅನುಭವಿಸಲು ಈಗಿನಿಂದಲೇ ಕಾತುರದಿಂದ ಕಾಯ್ತಿದ್ದು, ಹೆರಿಗೆಗಾಗಿ ಲಂಡನ್‌ಗೆ ಹೋಗ್ತಿರುವ ಸುದ್ದಿ ಸುಳ್ಳುಂತೆ.

ಕೊನೆಯದಾಗಿ ದೀಪಿಕಾ ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟಿಸಿ, ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದನ್ನೂ ಓದಿ: Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ 

Share This Article