ಲಂಡನ್: ಆಂಡ್ರಾಯ್ಡ್ ನಲ್ಲಿ ಫೋನ್ ಮತ್ತು ಮೆಸೇಜ್ ಅಪ್ಲಿಕೇಶನ್ ಬಳಸಿಕೊಂಡು ಬಳಕೆದಾರರ ಡೇಟಾವನ್ನು ಗೂಗಲ್ ಸಂಗ್ರಹಿಸುತ್ತಿದ್ದು ಸಿಕ್ಕಿಬಿದ್ದಿದೆ.
ಟೆಕ್ ಕಂಪನಿಗಳು ನಿಮ್ಮ ಬಗ್ಗೆ ಎಷ್ಟು ತಿಳಿದಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಡೇಟಾ ನಿಜವಾಗಿಯೂ ಖಾಸಗಿಯಾಗಿದೆಯೇ? ಎಂಬುದರ ಬಗ್ಗೆ ಬಳಕೆದಾರರು ಯೋಚಿಸಬೇಕು. ಲಂಡನ್‍ನ ಟ್ರಿನಿಟಿ ಕಾಲೇಜಿನ ಪ್ರೋಫೆಸರ್ ಡೌಗ್ಲಾಸ್ ಲೀತ್ ಪ್ರಕಟಿಸಿದ ಸಂಶೋಧನಾ ಪ್ರಬಂಧವು, ಗೂಗಲ್ ನಿಂದ ಆಂಡ್ರೊಯ್ ಫೋನ್‍ಗಳಲ್ಲಿ ಮೆಸೇಜ್ ಅಪ್ಲಿಕೇಶನ್ ಬಳಸುವ ಬಳಕೆದಾರರಿಂದ ಸಂಗ್ರಹಿಸಬಹುದಾದ ಡೇಟಾದ ಪ್ರಮಾಣವನ್ನು ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ
ಈ ಪ್ರಬಂಧದಲ್ಲಿ, ಗೂಗಲ್ ತನ್ನ ಬಳಕೆದಾರರ ಫೋನ್ ಕಾಲ್ ದಾಖಲೆ ಮತ್ತು ಮೇಸೆಜ್ ಲೀಟ್ಸ್‌ನನ್ನು ಅವರ ಒಪ್ಪಿಗೆಯಿಲ್ಲದೆ ಸಂಗ್ರಹಿಸುತ್ತಿದೆ. ಗೂಗಲ್ ಪೇ ಸೇವೆಗಳಿಂದಲೂ ಗೂಗಲ್ ಹೆಚ್ಚು ಡೇಟಾ ಸಂಗ್ರಹ ಮಾಡುತ್ತಿದೆ. ಈ ಮೂಲಕ ಡೇಟಾವನ್ನು ಸಿಂಕ್ ಮಾಡುತ್ತದೆ ಎಂದು ಬಳಕೆದಾರರಿಗೆ ಬಹಿರಂಗಪಡಿಸಿದೆ.
ಗೂಗಲ್‍ನ ಗೌಪ್ಯತೆ ನೀತಿಗಳಲ್ಲಿ ಒಳಗೊಂಡಿರುವ ವ್ಯಾಪ್ತಿಯಿಂದ ಹೊರಗುಳಿದು ಗೂಗಲ್ ಡೇಟಾವನ್ನು ಸಂಗ್ರಹಿಸುತ್ತಿದೆ. ಉದಾಹರಣೆಗೆ ಮೇಸೆಜ್ ಅಪ್ಲಿಕೇಶನ್, ನಿಮ್ಮ ಸಂದೇಶದ ವಿಷಯ ಮತ್ತು ಟೈಮ್‍ಸ್ಟ್ಯಾಂಪ್‍ಗಳನ್ನು ತೆಗೆದುಕೊಳ್ಳುತ್ತದೆ. ಇದು ನಂತರ ಡೇಟಾವನ್ನು ಅನಾಮಧೇಯವಾಗಿಡಲು ಹ್ಯಾಶ್ ರಚಿಸುತ್ತದೆ. ಅದರ ಒಂದು ಭಾಗವನ್ನು ಗೂಗಲ್‍ನ ಸರ್ವರ್‌ಗಳಿಗೆ ಕಳುಹಿಸುತ್ತದೆ ಎಂದು ಪ್ರೋ.ಲೀತ್ ವಿವರಿಸುತ್ತಾರೆ. ಇದನ್ನೂ ಓದಿ: ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ
ಆಂಡ್ರೊಯ್ ಡೇಟಾವು ಮೆಸೇಜ್ ಲಿಸ್ಟ್‌ನ ಹ್ಯಾಶ್ ಮತ್ತು ಫೋನ್ ಕಾಲ್ ಅವಧಿಯನ್ನು ಒಳಗೊಂಡಿದೆ ಎಂದು ಡಬ್ಲಿನ್ ಪ್ರೋ.ಡೌಗ್ಲಾಸ್ ಲೀತ್ ಹೇಳಿದ್ದಾರೆ. ಇದನ್ನು ತಿಳಿಸಲು ಲೀತ್ ತಮ್ಮ ಸಂಶೋಧನೆಗಳನ್ನು ಗೂಗಲ್‍ನೊಂದಿಗೆ ಹಂಚಿಕೊಂಡರು. ನಂತರ ಅದರಲ್ಲಿ ನಡೆಯುವ ಬದಲಾವಣೆಗಳನ್ನು ನೇರವಾಗಿ ತೋರಿಸಿದ್ದಾರೆ.