ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಸಿಗಲಿದೆ ಗೂಗಲ್ ಸ್ಟ್ರೀಟ್ ವ್ಯೂ ಸೇವೆ

Public TV
2 Min Read

ನವದೆಹಲಿ: ನಗರಗಳ ರಸ್ತೆಗಳ ಚಿತ್ರಗಳನ್ನು ನೋಡಲು ಹಾಗೂ ನ್ಯಾವಿಗೇಟ್ ಮಾಡುವ ಸಾಮರ್ಥ್ಯವಿರುವ ಫೀಚರ್ ಅನ್ನು ಗೂಗಲ್ ಬುಧವಾರದಿಂದ ಭಾರತದಲ್ಲೂ ಪ್ರಾರಂಭಿಸಿದೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 10 ನಗರಗಳಲ್ಲಿ ಗೂಗಲ್ ಈ ಫೀಚರ್ ಸಿಗಲಿದೆ.

ಗೂಗಲ್ ಮ್ಯಾಪ್‌ನ ಅತ್ಯಂತ ಉಪಯುಕ್ತವಾಗಿರುವ ಈ ಫೀಚರ್ 2016ರಲ್ಲೇ ಭಾರತದಲ್ಲೂ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಸರ್ಕಾರ ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಾರಂಭಿಸಲು ಬಿಟ್ಟಿರಲಿಲ್ಲ. ಆದರೆ ಇದೀಗ ಈ ಫೀಚರ್ ಕೊನೆಗೂ ಭಾರತಕ್ಕೂ ಲಗ್ಗೆಯಿಟ್ಟಿದೆ.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹಮದ್‌ನಗರ ಮತ್ತು ಅಮೃತಸರ ನಗರಗಳಲ್ಲಿ ಈ ಫೀಚರ್  ಆರಂಭಿಕ ಹಂತದಲ್ಲಿ ಸಿಗಲಿದ್ದು, ಶೀಘ್ರವೇ ಭಾರತದಾದ್ಯಂತ ಈ ಸೇವೆ ಲಭ್ಯವಾಗಲಿದೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

ಇದರ ಕೆಲಸವೇನು?
ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಬಹು ಉಪಯುಕ್ತವಾಗಲಿದೆ. ನಾವು ನೋಡಬಯಸುವ ಸ್ಥಳ ಮುಂಚಿತವಾಗಿಯೇ ಹೇಗೆ ಕಾಣಿಸುತ್ತದೆ ಎಂಬುದನ್ನು ನಾವು ರಸ್ತೆಯ ಮಟ್ಟದಿಂದಲೇ ನೋಡಬಹುದು. ಮಾತ್ರವಲ್ಲದೇ ಅದು ತೋರಿಸುವ ಒಂದೇ ಫೋಟೋ 360 ಡಿಗ್ರಿ ಆಂಗಲ್‌ನಿಂದಲೂ(ಪನರೊಮಾ) ವೀಕ್ಷಿಸಬಹುದು.

ಗೂಗಲ್ ಈ ಬಗ್ಗೆ ಬುಧವಾರ ನವದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಜೆನೆಸಿಸ್ ಹಾಗೂ ಟೆಕ್ ಮಹೀಂದ್ರಾ ಸಹಯೋಗದೊಂದಿಗೆ ಸ್ಟ್ರೀಟ್ ವ್ಯೂ ಅನ್ನು ಭಾರತಕ್ಕೂ ತರುವುದಾಗಿ ಘೋಷಿಸಿತು. ಆರಂಭದಲ್ಲಿ 1,50,000 ಕಿ.ಮೀ ರಸ್ತೆಗಳನ್ನು ಒಳಗೊಂಡ 10 ನಗರಗಳಲ್ಲಿ ಈ ಫೀಚರ್‌ಗೆ ಚಾಲನೆ ನೀಡುವುದಾಗಿ ತಿಳಿಸಿತು. ಈ ವರ್ಷದ ಅಂತ್ಯದ ವೇಳೆಗೆ ದೇಶದ 50 ನಗರಗಳಲ್ಲಿ ಈ ಫೀಚರ್ ಅನ್ನು ವಿಸ್ತರಿಸುವ ಗುರಿಯನ್ನು ಗೂಗಲ್ ಹೊಂದಿದೆ. ಇದನ್ನೂ ಓದಿ: 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ

ವೀಕ್ಷಣೆ ಮಾಡುವುದು ಹೇಗೆ?
ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ವೀಕ್ಷಣೆ ಮಾಡಲು ಮೊದಲು ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು. ನೀವು ವೀಕ್ಷಿಸಲು ಬಯಸುವ ಪ್ರದೇಶದ ಹೆಸರನ್ನು ನಮೂದಿಸಿ, ಹುಡುಕಿ. ನೀವು ವೀಕ್ಷಿಸಲು ಬಯಸುವ ಪ್ರದೇಶವನ್ನು ಟ್ಯಾಪ್ ಮಾಡಿ ಹಾಗೂ ಸ್ಥಳೀಯ ಕಟ್ಟಡ, ಹೋಟೆಲ್, ರಸ್ತೆ ಇನ್ನಿತರ ಫೋಟೋಗಳನ್ನು ಸುಲಭವಾಗಿ ನೋಡಬಹುದು.

ಫೋಟೋಗಳನ್ನು 360 ಡಿಗ್ರಿ ಆಂಗಲ್‌ನಲ್ಲೂ ವೀಕ್ಷಿಸಲು ಸಾಧ್ಯವಿದ್ದು, ಸ್ಟ್ರೀನ್‌ನಲ್ಲಿ ತೋರುವ ಎಡ, ಬಲ, ಮೇಲೆ ಕೆಳಗೆ, ಬಟನ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಸಂಪೂರ್ಣ ಚಿತ್ರವನ್ನು ವೀಕ್ಷಿಸಬಹುದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *