Geminiಯ ನ್ಯಾನೋ ಬನಾನಾ ಟ್ರೆಂಡ್ ಫಾಲೋ ಮಾಡ್ತಿದ್ದೀರಾ – ಇದು ಎಷ್ಟು ಸೇಫ್? 

Public TV
3 Min Read

ಜಗತ್ತಿನಲ್ಲಿ ಪ್ರತಿದಿನ ಏನಾದರೂ ಒಂದು ಹೊಸತನ ಎಂಬುದು ಸೃಷ್ಟಿಯಾಗುತ್ತಲೇ ಇರುತ್ತದೆ. ಭೂಮಿ ಆರಂಭದಲ್ಲಿ ಜಗತ್ತು ಹೇಗಿತ್ತು ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡು ಈಗಿರುವ ಜಗತ್ತಿಗೂ ಮೊದಲಿನದಕ್ಕೂ ತುಂಬಾ ವ್ಯತ್ಯಾಸವಿದೆ. ಉದಾಹರಣೆಗೆ ನಮ್ಮ ಬಾಲ್ಯಕ್ಕೂ ಈಗಿನ ಮಕ್ಕಳು ಅನುಭವಿಸುತ್ತಿರುವ ಬಾಲ್ಯಕ್ಕೂ ತುಂಬಾ ವ್ಯತ್ಯಾಸವಿದೆ. ಈ ಬದಲಾವಣೆ ಮೇಲೆ ಹೆಚ್ಚಿನ ಪರಿಣಾಮ ಬೀರಿರುವುದು ತಂತ್ರಜ್ಞಾನ. ಜಗತ್ತಿನಲ್ಲಿ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನವು ಜನರ ಮೇಲೆ ಪರಿಣಾಮ ಬೀರುತ್ತಲೇ ಇದೆ. ದಿನಗಳದಂತೆ ಇದು ಹೆಚ್ಚಾಗುತ್ತದೆ ವಿನಃ ಕಡಿಮೆಯಾಗುವುದಿಲ್ಲ. 

ಹೌದು, ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ ನಮ್ಮನ್ನು ಆಳುತ್ತಿದೆ. ನಮ್ಮ ಮೇಲೆ ಆಳ್ವಿಕೆ ನಡೆಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಿಜಕ್ಕೂ ಇಂತಹ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಕಾಣುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಂಪು ಬಣ್ಣದ ಸೀರೆ , ತಲೆಯಲ್ಲೊಂದು ಚೆಂದದ ಹೂವು ಹಾಕಿ ಸುಂದರ ಮೊಗದ ಹುಡುಗಿಯ ಫೋಟೋಗಳು ಹರಿದಾಡುತ್ತಿವೆ. ಏನಿದು? ಯಾಕೆ ಈ ಬದಲಾವಣೆ ಇದೆಲ್ಲದಕ್ಕೂ ಮಾಹಿತಿ ಇಲ್ಲಿದೆ. 

AI Image
AI Image

ನ್ಯಾನೋ ಬನಾನಾ ಟ್ರೆಂಡ್ :

ಸೋಶಿಯಲ್ ಮೀಡಿಯಾ ಆರಂಭವಾದಾಗ ಫೇಸ್ಬುಕ್, ಇನ್ಸ್ಟಾಗ್ರಾಮ್, ಈಗಿನ ಎಕ್ಸ್ ಗೆ ಎಲ್ಲವೂ ಒಂದು ವಿಭಿನ್ನ ರೀತಿಯಲ್ಲಿ ಜನರನ್ನ ತಮ್ಮೆಡೆಗೆ ಸೆಳೆದಿದ್ದವು. ಆಗ ಪೋಸ್ಟ್ ಹಾಕುವುದೆಂದರೆ ಒಂದು ಕ್ರೇಜ್. ಅದಾದ ಬಳಿಕ ಬಂದ Instagram ಈಗ ಎಲ್ಲರ ಮನೆ ಮಾತಾಗಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಅದರದ್ದೇ ಗುಂಗು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಕಡಿಮೆ ಸಮಯದಲ್ಲಿ ಜನರನ್ನ ಸೆಳೆಯುವಂತೆ ಮಾಡಿದ್ದು ಕೃತಕ ಬುದ್ಧಿಮತ್ತೆ ಅಥವಾ AI. . ಹೌದು ಇತ್ತೀಚಿಗೆ ಸ್ವಲ್ಪ ತಿಂಗಳುಗಳ ಹಿಂದೆ CHAT GPT ಅಲ್ಲಿ ಜಿಬ್ಲಿ ಎಂಬ ಟ್ರೆಂಡ್ ತುಂಬಾ ಕ್ರೇಜ್ ಮೂಡಿಸಿತ್ತು. ಅದರಂತೆ ಇದೀಗ ಗೂಗಲ್ ಜೆಮಿನಿಯ ನ್ಯಾನೋ ಬನಾನಾ ಟ್ರೆಂಡ್ ಭಾರಿ ಸದ್ದು ಮಾಡುತ್ತಿದೆ.

ಇದು ಹೇಗೆ ಕೆಲಸ ಮಾಡುತ್ತೆ? 

ಮೊಬೈಲ್ ನಲ್ಲಿ ಗೂಗಲ್ ಅಸಿಸ್ಟೆಂಟ್ ಇದ್ದ ಹಾಗೆ ಇದೀಗ ಗೂಗಲ್ ಜೆಮಿನಿ ನಿಮ್ಮ ಎಲ್ಲ ಕೆಲಸಕ್ಕೆ ಉತ್ತರ ನೀಡಲು ಸಹಾಯ ಮಾಡುತ್ತೆ. ಅದೇ ರೀತಿ ನಿಮ್ಮ ಒಂದು ಫೋಟೋವನ್ನು ಜೆಮಿನಿಯಲ್ಲಿ ಹಂಚಿಕೊಳ್ಳಬೇಕು. ಬಳಿಕ ನೀವು ನಿಮ್ಮ ಫೋಟೋವನ್ನು ಅಥವಾ ನಿಮ್ಮನ್ನು ಯಾವ ರೀತಿ ನೋಡಬೇಕೆಂದುಕೊಳ್ಳುತ್ತೀರೋ ಆ ರೀತಿ ಬರೆದರೆ ಅಥವಾ ಪದಗಳ ರೂಪದಲ್ಲಿ ತಿಳಿಸಬೇಕು. ಆಗ ನೀವು ನಿಮ್ಮ ಫೋಟೋವನ್ನು ಅದೇ ರೀತಿಯಲ್ಲಿ ಕಾಣುತ್ತೀರಿ. ಇದೆ ನ್ಯಾನೋ ಬನಾನಾ ಟ್ರೆಂಡ್. 

AI Image
AI Image

ಈ ಟ್ರೆಂಡ್ ಅನ್ನು ಇದೀಗ ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ. ತಮ್ಮ ಫೋಟೋವನ್ನು ಹಾಕಿ ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಜನರು ತಮ್ಮನ್ನು ಚಂದದ ಸೀರೆ, ಹೂಗಳು ಸೇರಿದಂತೆ ಇನ್ನಿತರ ರೀತಿಯಲ್ಲಿ ತಮ್ಮನ್ನು ಕಾಣಲು ಬಯಸುತ್ತಿದ್ದಾರೆ. ಈ ಮೂಲಕ ನ್ಯಾನೋ ಬನಾನಾ ಟ್ರೆಂಡ್ ಸದ್ದು ಮಾಡುತ್ತದೆ. 

ಈ ಟ್ರೆಂಡ್ ಆರಂಭವಾದ ಬಳಿಕ ಸೆಪ್ಟೆಂಬರ್ ಮಧ್ಯ ಭಾಗದವರೆಗೆ ಈ ಜೆಮಿನಿಯಲ್ಲಿ 500 ಮಿಲಿಯನ್ ಗಿಂತಲೂ ಹೆಚ್ಚು ಜನರು ತಮ್ಮ  ಹೊಸ ರೀತಿಯ ಫೋಟೋಗಳನ್ನ ಪಡೆದುಕೊಂಡಿದ್ದಾರೆ. ಅದಲ್ಲದೆ ಆಪಲ್ ಆಪ್ ಸ್ಟೋರ್ ಹಾಗೂ ಪ್ಲೇ ಸ್ಟೋರ್ ನಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಆಗಸ್ಟ್ 26 ರಿಂದ ಸೆಪ್ಟೆಂಬರ್ 9ರ ನಡುವೆ 23 ಮಿಲಿಯನ್ ಗೂ ಹೆಚ್ಚು ಹೊಸ ಬಳಕೆದಾರರು ಸೇರಿಕೊಂಡಿದ್ದಾರೆ. 

AI Image
AI Image

ಈ ನ್ಯಾನೋ ಬನಾನಾ ಟ್ರೆಂಡ್ ಎಷ್ಟು ಸುರಕ್ಷಿತ? 

ಗೂಗಲ್ ಸೇರಿದಂತೆ ಇನ್ನಿತರ ಎಐ ತಂತ್ರಜ್ಞಾನವನ್ನು ಹೊಂದಿರುವ ವೆಬ್ಸೈಟ್ಗಳು ಬಳಕೆದಾರರಿಗೆ ಕೆಲವು ನೀತಿ ನಿಯಮಗಳನ್ನು ಹೊಂದಿರುತ್ತವೆ. ಅದರಂತೆ ನಾವು ಕೂಡ ಸಂಪೂರ್ಣ ನಂಬಿಕೆಯೊಂದಿಗೆ ಅವುಗಳನ್ನು ಬಳಸುತ್ತೇವೆ. ಆದರೂ ಕೂಡ ಯಾವುದೇ ಪ್ಲಾಟ್  ಫಾರ್ಮ್ ಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಯಾವುದೇ ಫೋಟೋವನ್ನು ಎ ಐ ಜೊತೆಗೆ ಹಂಚಿಕೊಂಡಾಗ ಅದು ದುರುಪಯೋಗಪಡಿಸಿಕೊಳ್ಳಬಹುದು, ಅಥವಾ ನಮ್ಮ ಫೋಟೋವನ್ನು ಬೇರೆ ಯಾರದ್ದೋ ಫೋಟೋವಿಗೆ ಹೊಂದಾಣಿಕೆ ಮಾಡಬಹುದು. ಅದಲ್ಲದೆ ಬೇರೆ ಯಾರಾದರೂ ಯಾವುದೊ ಒಂದು ಫೋಟೋವನ್ನು ಕೇಳಿದಾಗ ನಿಮ್ಮ ರೀತಿಯದ್ದೇ ಆದ ಫೋಟೋವನ್ನು ರಚಿಸಿ ಕೊಡಬಹುದು. ಇದೇ ಪ್ರಶ್ನೆಯನ್ನು ನೀವು ಸ್ವತಃ ಎ ಐ ಬಳಿ ಕೇಳಿದಾಗ ಅದು ನಾನು ಯಾವುದೇ ಫೋಟೋಗಳನ್ನ ಸಂಗ್ರಹಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ತಿಳಿಸುತ್ತದೆ.

Share This Article