ಕಚೇರಿಯಲ್ಲೇ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿದ 28 ಗೂಗಲ್‌ ಸಿಬ್ಬಂದಿ ವಜಾ

Public TV
1 Min Read

ಕ್ಯಾಲಿಫೋರ್ನಿಯಾ: ಕಚೇರಿಯ ಒಳಗಡೆ ಪ್ಯಾಲೆಸ್ತೀನ್‌ (Palestine) ಪರ ಘೋಷಣೆ ಕೂಗಿದ 28 ಸಿಬ್ಬಂದಿಯನ್ನು ಗೂಗಲ್‌ (Google) ಮನೆಗೆ ಕಳುಹಿಸಿದೆ.

ಕಂಪನಿಯು ಇಸ್ರೇಲ್‌ನೊಂದಿಗೆ 1.2 ಬಿಲಿಯನ್ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ವಿರೋಧಿಸಿ ಉದ್ಯೋಗಿಗಳು ಪ್ರತಿಭಟಿಸಿದ್ದರು. ಕೆಲವರು ಕ್ಯಾಲಿಫೋರ್ನಿಯಾದಲ್ಲಿರುವ ಕಚೇರಿ ಒಳಗಡೆ ಪ್ರತಿಭಟಿಸಿದ್ದರೆ ಇನ್ನು ಕೆಲವರು ನ್ಯೂಯಾರ್ಕ್‌ನಲ್ಲಿರುವ ಪ್ರಧಾನ ಕಚೇರಿಯಲ್ಲಿ ಧರಣಿ ನಡೆಸಿದ್ದರು.ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

ಏಪ್ರಿಲ್ 16 ರಂದು ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರ ಕ್ಯಾಲಿಫೋರ್ನಿಯಾದ ಕಚೇರಿ ಪ್ರವೇಶಿಸಿ ಸಿಬ್ಬಂದಿ ಪ್ರತಿಭಟಿಸಿದ್ದರು. ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅವರನ್ನು ಪೊಲೀಸರು ಅವರನ್ನು ಬಂಧಿಸಿದ್ದರು.  ಇದನ್ನೂ ಓದಿ: ನಾವೇ ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದು: ಕುಮಾರಸ್ವಾಮಿ

ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಗೂಗಲ್‌ ಗಾಜಾದಲ್ಲಿ ಇಸ್ರೇಲ್‌ (Israel) ನಡೆಸುತ್ತಿರುವ ಯುದ್ಧ ಪ್ಯಾಲೆಸ್ತೀನ್‌ ಜನರ  ನರಮೇಧಕ್ಕೆ ಶಕ್ತಿ ತುಂಬುತ್ತಿದೆ. ಹೀಗಾಗಿ ಕೂಡಲೇ ಈ ಒಪ್ಪಂದವನ್ನು ರದ್ದು ಮಾಡಬೇಕೆಂದು ಸಿಬ್ಬಂದಿ ಪ್ರತಿಭಟಿಸುತ್ತಿದ್ದರು. ಗೂಗಲ್‌ ಕಂಪನಿ ಆಂತರಿಕ ತನಿಖೆ ನಡೆಸಿ ಪ್ರತಿಭಟನೆ ನಡೆಸಿದ ಸಿಬ್ಬಂದಿಯನ್ನು ಈಗ ವಜಾ ಮಾಡಿದೆ.

 

Share This Article