ಬೆಂಗಳೂರು: ಗೂಗಲ್ (Google) ನಮ್ಮ ಜೊತೆ ಚರ್ಚೆಗೆ ಬಂದಿದ್ರೆ ಟೀಕೆ ಮಾಡಬಹುದಿತ್ತು. ನಮ್ಮ ಜೊತೆಗೆ ಚರ್ಚೆಗೆ ಬಂದ ಯಾವ ಕಂಪನಿಯನ್ನು ನಾವು ಬಿಟ್ಟಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಗೂಗಲ್ ಎಐ ಹಬ್ (Google AI Hub) ಆಂಧ್ರಕ್ಕೆ ಹೋದ ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬಹಳ ಸರಳವಾಗಿ ಮುಚ್ಚಿ ಹಾಕ್ತಾರೆ. 22 ಸಾವಿರ ಕೋಟಿ ಇನ್ಸೆಂಟಿವ್ ಆಂಧ್ರಪ್ರದೇಶ ಸರ್ಕಾರಕ್ಕೆ ಕೇಂದ್ರ ಕೊಡುತ್ತಿದೆ. 25% ಲ್ಯಾಂಡ್ ರಿಯಾಯಿತಿ, ವಾಟರ್, ವಿದ್ಯುತ್ ಫ್ರೀ ಕೊಡುತ್ತಾರೆ. 100% ರಾಜ್ಯ ಜಿಎಸ್ಟಿ ಮರುಪಾವತಿ ಕೊಡುತ್ತಿದ್ದಾರೆ ಎಂಬುದನ್ನ ಬಿಜೆಪಿಯವರು ಹೇಳಲ್ಲ. ಇದೇ ನಮ್ಮ ರಾಜ್ಯ ಕೊಟ್ಟಿದ್ರೆ ಇವರು ಸರ್ಕಾರ ದಿವಾಳಿತನಕ್ಕೆ ಮುಂದಾಗುತ್ತಿದೆ ಎನ್ನುತ್ತಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ – ಪರಿಶೀಲಿಸಿ ಕ್ರಮಕ್ಕೆ ಸೂಚನೆ: ಪರಮೇಶ್ವರ್
ನಾವು ಇಡೀ ಜಗತ್ತಿನ ಎಐ ಡೆವಲಪ್ಮೆಂಟ್‌ನಲ್ಲಿ 5ನೇ ಸ್ಥಾನದಲ್ಲಿದ್ದೇವೆ. ನಾಲ್ಕನೇ ದೊಡ್ಡ ಟೆಕ್ನಾಲಜಿ ಕ್ಲಸ್ಟರ್ ನಾವು. ನಾಲ್ಕೂವರೆ ಲಕ್ಷ ಕೋಟಿ ಐಟಿ ರಫ್ತು ಮಾಡುತ್ತೇವೆ. ಆಂಧ್ರಪ್ರದೇಶದ್ದು 2 ಲಕ್ಷ ಕೋಟಿ ಅಷ್ಟೇ. ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ವ್ಯತ್ಯಾಸ ಬಹಳ ದೊಡ್ಡದಿದೆ. ನಮ್ಮ ಬಳಿ ಕ್ವಾಂಟಮ್ ರೋಡ್ ಮ್ಯಾಪ್ ಇದೆ. ಅವರ ಬಳಿ ಇದೆಯಾ? ಬಂಡವಾಳ ಹಾಕುವವರು ಎಲ್ಲಿ ಬೇಕಾದರೂ ಹಾಕುತ್ತಾರೆ. ಗೂಗಲ್ ಅನಂತ ಎಂಬ ಬಹುದೊಡ್ಡ ಕ್ಯಾಂಪಸ್ ನಮ್ಮ ಬೆಂಗಳೂರಿನಲ್ಲಿದೆ. ಚರ್ಚೆಗೆ ಬರಲು ನಾವು ರೆಡಿ ಇದ್ದೇವೆ, ಆದರೆ ಇವರು ಚರ್ಚೆಗೆ ಬರಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್ ಹೊಡೆದ ತಮಿಳುನಾಡು ಸರ್ಕಾರ