ಇ-ಸ್ಟ್ಯಾಂಪ್‌ಗೆ ಗುಡ್ ಬೈ – ಇನ್ಮುಂದೆ ಕರ್ನಾಟಕದಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್‌

2 Min Read

ಬೆಂಗಳೂರು: ಇ-ಸ್ಟ್ಯಾಂಪಿಂಗ್‌ (E-Stamp) ವ್ಯವಸ್ಥೆಗೆ ಸರ್ಕಾರ ಗುಡ್ ಬೈ ಹೇಳಿದೆ. ಛಾಪಾ ಅಥಾ ಇ-ಸ್ಟ್ಯಾಂಪ್‌ ಕಾಗದಗಳಿಗೆ ಸರ್ಕಾರ ಡಿಜಿಟಲ್ ಸ್ಪರ್ಶ ಕೊಟ್ಟಿದೆ. ಕಳೆದ ಅಕ್ಟೋಬರ್‌ನಿಂದಲೇ ರಾಜ್ಯದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ (Digital E-Stamping) ಜಾರಿಗೆ ಬಂದಿದೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ(Krishna Byre Gowda) ಇನ್ನು ಮುಂದೆ ಡಿಜಿಟಲ್ ಛಾಪಾ ಕಾಗದಗಳ ಬಳಕೆಗೇ ಹೆಚ್ಚು ಒತ್ತು ಕೊಡಲಾಗುತ್ತದೆ. ಹಂತಹಂತವಾಗಿ ಇ-ಸ್ಟ್ಯಾಂಪ್‌ ಗಳನ್ನು ನಿಲ್ಲಿಸಲಾಗುವುದು. ಡಿಜಿಟಲ್ ಇ ಛಾಪಾಕ್ಕೆ ಮತ್ತಷ್ಟು ಬಲ ತುಂಬಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇದಕ್ಕಾಗಿ, ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ-2025 ಜಾರಿಯಾಗಿದೆ ಎಂದರು.  ಇದನ್ನೂ ಓದಿ:  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ, ಸಿದ್ದರಾಮಯ್ಯ ಓಬಿಸಿ ನಾಯಕರಲ್ಲ: ಅರವಿಂದ ಬೆಲ್ಲದ್ ಚಾಟಿ

ಇನ್ನು ಮಂದೆ ಇ-ಸ್ಟ್ಯಾಂಪ್‌ ಬದಲಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವಿತರಿಸಲಾಗುತ್ತದೆ. ಸ್ಟಾಂಪಿಂಗ್‌ ದುರ್ಬಳಕೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಚಲನ್‌ ಕೊಟ್ಟು ಉಪ ನೋಂದಣಾಧಿಕಾರಿಗಳಿಂದ ಛಾಪಾ ಕಾಗದ ಪಡೆಯುವುದಕ್ಕೆ ಕಡಿವಾಣ ಹಾಕಲು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಮತ್ತು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದೆ. ಇದಕ್ಕೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ನೋಂದಣಿಯಾಗದ ಅಗ್ರಿಮೆಂಟ್‌ಗಳಿಗೂ ಡಿಜಿಟಲ್ ಇ ಸ್ಟ್ಯಾಂಪ್‌ ಅನ್ವಯಿಸಲಿದೆ. ಛಾಪಾ ಕಾಗದ ತೆಗೆದುಕೊಳ್ಳಲು ಅವುಗಳನ್ನು ಮಾರಾಟ ಮಾಡುವ ಸ್ಥಳಗಳಿಗೆ ಜನ ಹೋಗಬೇಕಾಗಿತ್ತು. ಈಗ ಮನೆಯಲ್ಲಿ ಕೂತು ಛಾಪಾ ಕಾಗದ ಖರೀದಿ ಮಾಡಬಹುದು. ಮಧ್ಯವರ್ತಿಗಳ ಮೇಲೆ ಅವಲಂಬಿತವಾಗಬೇಕಿಲ್ಲ. ಇದು ಪೂರ್ತಿ ಆನ್‌ಲೈನ್ ನಲ್ಲಿ ಭದ್ರತೆಯಲ್ಲಿರುತ್ತೆ. ಈ ಮೊದಲು ಕಳೆದು ಹೋದರೆ ದಾಖಲೆ ಇರುತ್ತಿರಲಿಲ್ಲ. ಈಗ ಒಂದು ಬಾರಿ ಅಗ್ರಿಮೆಂಟ್ ಮಾಡಿಕೊಂಡ್ರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿ ಇರಲಿದೆ. ಬೇಕಾದಾಗ ಇದನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು. ಇದನ್ನೂ ಓದಿ:  ನಿರ್ದೇಶಕ ರಾಜ್ ನಿಡಿಮೋರು ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ನಟಿ ಸಮಂತಾ

ಎಲ್ಲಾ ಸ್ವರೂಪದ ಡಿಜಿಟಲ್ ಅಗ್ರಿಮೆಂಟ್ ಮಾಡಲು ಅವಕಾಶ ಇದೆ. ನಂಬರ್, ಕ್ಯೂರ್ ಕೋಡ್ ಇರುತ್ತದೆ. ಡಿಜಿಟಲ್ ಛಾಪಾಕಾಗದದ ಫೀಸ್ ಕೂಡ ಹೆಚ್ಚಾಗುವುದಿಲ್ಲ. ಆಧಾರ್ ಕೊಟ್ಟು ಒಟಿಪಿ ಬಂದ ನಂತರ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಯಾರ ನಡುವೆ ಅಗ್ರಿಮೆಂಟ್ ಆಗುತ್ತೆ ಅವರು ಆಧಾರ್ ಕೊಟ್ಟು ಒಟಿಪಿ ಬಂದ್ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತೆ ಅಂತ ಕೃಷ್ಣಬೈರೇಗೌಡ ಹೇಳಿದರು.

Share This Article