‘ಬಿಗ್ ಬಾಸ್’ ಪ್ರೇಕ್ಷಕರಿಗೆ ಗುಡ್ ನ್ಯೂಸ್- ಇಲ್ಲಿದೆ ಬಿಗ್ ಸರ್ಪ್ರೈಸ್

Public TV
1 Min Read

ಬಿಗ್ ಬಾಸ್ ಕನ್ನಡ 10 (Bigg Boss Kannada 10) ರಿಯಾಲಿಟಿ ಶೋ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಟಿಆರ್‌ಪಿ ರೇಸ್‌ನಲ್ಲಿಯೂ ಮುಂದಿದೆ. ಹೀಗಿರುವಾಗ ಅಭಿಮಾನಿಗಳಿಗೆ ಬಿಗ್ ಬಾಸ್ ಶೋ ಬಗ್ಗೆ ಗುಡ್ ನ್ಯೂಸ್ ಸಿಕಿದೆ. ವಾಹಿನಿ ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.

ಸುದೀಪ್ (Sudeep) ನಿರೂಪಣೆಯ ಬಿಗ್ ಬಾಸ್ ಶೋಗೆ ಈ ಬಾರಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ದೊಡ್ಮನೆ ಆಟದಲ್ಲಿ ಹಲವು ಘರ್ಷಣೆ ನಡೆದಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆದರೆ ಈಗ 100 ದಿನಗಳ ಆಟ ಮತ್ತೆ ಮುಂದೂಡುವ ಸಾಧ್ಯತೆ ಇದೆ.

ಬಿಗ್ ಬಾಸ್ ಅಂದಾಕ್ಷಣ ನೆನಪಾಗೋದು 100 ದಿನಗಳ ಆಟ. ಸಾಕಷ್ಟು ಬಾರಿ 98 ದಿನಕ್ಕೆ ಶೋ ದಿ ಎಂಡ್ ಆಗಿದ್ದು ಇದೆ. ಈ ಹಿಂದಿನ ಸೀಸನ್‌ಗಳಲ್ಲಿ 117 ದಿನಗಳ ಕಾಲ ಮತ್ತು 112 ದಿನಗಳ ಕಾಲ ನಡೆದ ಇತಿಹಾಸವಿದೆ. ಇದೀಗ ಈ ಸೀಸನ್ ಇನ್ನೂ ಎರಡು ವಾರಗಳ ವಾಹಿನಿ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ದಶಕದ ಸಂಭ್ರಮಕ್ಕೆ ಜೊತೆಯಾದ ‘ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ’

ಈ ಸೀಸನ್‌ನಲ್ಲಿ ಪ್ರೇಕ್ಷಕರು ವಿವಾದಗಳನ್ನೇ ನೋಡಿದ್ದಾರೆ. ಬಳೆ ಮ್ಯಾಟರ್, ಸಂಗೀತಾ ಮತ್ತು ಪ್ರತಾಪ್ ಕಣ್ಣಿಗೆ ಏಟಾಗಿದ್ದು, ವರ್ತೂರು ಸಂತೋಷ್ ಮದುವೆ ವಿವಾದ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಸುದ್ದಿ ಸಂಚಲನ ಮೂಡಿಸಿತ್ತು. ಟಿಆರ್‌ಪಿ ವಿಚಾರದಲ್ಲೂ ಈ ಹಿಂದಿನ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿದ ಕಾರಣ. ಇನ್ನೂ 14 ದಿನ ಹೆಚ್ಚುವರಿಯಾಗಿ ಶೋ ನಡೆಸಲು ವಾಹಿನಿ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

Share This Article