ಬೆಂಗಳೂರು: ಯುಗಾದಿ ಸಂಭ್ರಮದಲ್ಲಿರುವ ರಾಜ್ಯದ ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) 27ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಹಬ್ಬದ ಖರ್ಚಿಗೆ ಆಸರೆಯಾದಂತಾಗಿದೆ. ಯುಗಾದಿ ಹಬ್ಬದ ಬೆನ್ನಲ್ಲೇ ರಂಜಾನ್ ಕೂಡ ಇರುವುದರಿಂದ, ಈ ಹಣ ಬಿಡುಗಡೆಯು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ದೊಡ್ಡಮಟ್ಟದ ನೆರವು ನೀಡಿದೆ. ಇದನ್ನೂ ಓದಿ: ಆಲಿಕಲ್ಲಿನ ರಾಶಿ, ಗುಡುಗು, ಸಿಡಿಲಿನ ನರ್ತನ – ಮಳೆ ಅಬ್ಬರಕ್ಕೆ ನಲುಗಿದ ಶಿವಮೊಗ್ಗ
ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಕಂತುಗಳು ಈಗ ಬಂದಿದ್ದು ಗೃಹಿಣಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಎರಡು ತಿಂಗಳ ಹಣ ಬಾಕಿ ಇರೋದರ ಬಗ್ಗೆ ಮಹಿಳಾ ಇಲಾಖೆ ಸರಿಯಾದ ಕ್ಲಾರಿಟಿ ಕೊಡುತ್ತಿಲ್ಲ. ಕಳೆದ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಖಾತೆಗೆ ಹಾಕಿರೋ ಬಗ್ಗೆ ಸರಿಯಾದ ಕ್ಲಾರಿಟಿ ಇಲ್ಲ. ಸದ್ಯಕ್ಕೆ 27ನೆ ಕಂತಿನ ಹಣವನ್ನು ಮಹಿಳಾ ಇಲಾಖೆ ಮಹಿಳೆಯರ ಖಾತೆಗಳಿಗೆ ಜಮೆ ಮಾಡಿದೆ.

