ಗುಡ್‌ನ್ಯೂಸ್ – ಏ.1ರಿಂದ ಆಟೋ ದರ ಏರಿಕೆ ಇಲ್ಲ!

Public TV
2 Min Read

ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ (Bengaluru) ರಿಲ್ಯಾಕ್ಸ್ ಆಗಲಿದ್ದು, ಏ.1ರಿಂದ ಆಟೋ ದರ ಏರಿಕೆಗೆ (Auto Rate Hike) ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಈ ವರ್ಷದ ಆರಂಭದಿಂದಲೂ ನಿತ್ಯ ದರ ಏರಿಕೆ ಸುದ್ದಿ ಕೇಳಿ ಬೆಂಗಳೂರಿಗರು ಬೇಸತ್ತಿದ್ದರು. ಬಸ್, ಮೆಟ್ರೋ ದರ, ನೀರಿನ ದರ ಏರಿಕೆ ಬಳಿಕ ಏ.1ರಿಂದ ಆಟೋ ದರ ಕೂಡ ಏರಿಕೆಯಾಗಲಿದೆ ಎಂದು ಕೇಳಿಬರುತ್ತಿತ್ತು. ಆದರೆ ಇದೀಗ ಆಟೋ ದರ ಏರಿಕೆಗೆ ಜಿಲ್ಲಾಡಳಿತ ತಡೆ ನೀಡಿದೆ.ಇದನ್ನೂ ಓದಿ: ಸ್ಲೀಪ್‌ ಡಿವೋರ್ಸ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ – ಏನಿದು ನಿದ್ರಾ ವಿಚ್ಛೇದನ?

ಆಟೋ ದರ ಪರಿಷ್ಕರಣೆ ಸಂಬಂಧ ವಾರದ ಹಿಂದೆಯಷ್ಟೇ ಸಾರಿಗೆ ಇಲಾಖೆಯು (Transport Department) ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಏ.1ರಿಂದ ದರ ಏರಿಕೆ ಆಗುತ್ತದೆ ಎಂದು ಆಟೋ ಚಾಲಕರು ಖುಷಿಯಲ್ಲಿದ್ದರು. ಆದರೆ ಬೆಂಗಳೂರು ಡಿಸಿ ಮಾತ್ರ ಸದ್ಯಕ್ಕೆ ಆಟೋ ದರ ಏರಿಕೆ ಇಲ್ಲ, ದರ ಏರಿಕೆ ಸಂಬಂಧ ಸಾರಿಗೆ ಇಲಾಖೆಯಿಂದ ಸಭೆ ಮಾಡಿ ರಿಪೋರ್ಟ್ ಸಿದ್ಧಪಡಿಸಬೇಕಿದೆ. ಆ ನಂತರ ಮತ್ತೊಂದು ಮೀಟಿಂಗ್ ಮಾಡಿ ದರ ಏರಿಕೆ ನಿರ್ಧಾರ ಆಗಬೇಕು. ದರ ಏರಿಕೆ ಎಷ್ಟಾಗುತ್ತೆ? ಹೇಗೆ ಎನ್ನುವ ತೀರ್ಮಾನ ಆಗಲಿದೆ. ಈ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿ, ದರ ಪರಿಷ್ಕರಣೆ ಫೈನಲ್ ಆಗಬೇಕಾದರೆ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅತ್ತ ಜನ ನಿಟ್ಟುಸಿರು ಬಿಟ್ಟರೆ, ಇತ್ತ ಆಟೋ ಚಾಲಕರಿಗೆ ಕೊಂಚ ಬೇಸರವಾಗಿದೆ. ಯುಗಾದಿ (Yugadi) ಹಬ್ಬಕ್ಕೆ ಆಟೋ ಏರಿಕೆಯ ಗಿಫ್ಟ್ ಸಿಗುತ್ತದೆ ಎಂದು ಆಟೋ ಚಾಲಕರು, ಸಂಘಟನೆಗಳು ಖುಷಿಯಲ್ಲಿದ್ದರು. ಆದ್ರೆ ಸದ್ಯಕ್ಕೆ ದರ ಏರಿಕೆ ಆಗಲ್ಲ ಎಂದು ತಿಳಿಸಿದೆ.

ಈ ಹಿಂದೆ 2011ರಲ್ಲಿ ಆಟೋ ದರ ಪರಿಷ್ಕರಣೆ ಆಗಿತ್ತು. ಅದಾದ ನಂತರ 2021ರಲ್ಲಿ ಅಂದರೆ 10 ವರ್ಷಗಳ ಬಳಿಕ ದರ ಪರಿಷ್ಕರಣೆ ಆಗಿತ್ತು. ಹಿಂದಿನ ಪರಿಷ್ಕರಣೆಗೆ 10 ವರ್ಷಗಳ ಗ್ಯಾಪ್ ಇದೆ. ಇದೀಗ ಮೂರೇ ವರ್ಷಕ್ಕೆ ಆಟೋ ದರ ಪರಿಷ್ಕರಣೆ ಮಾಡಿ ಎಂದು ಒತ್ತಾಯ ಕೇಳಿ ಬಂದಿದ್ದು, ಇದು ಸರಿಯಿದಿಯಾ? ಇಲ್ವಾ? ಎನ್ನುವ ಪರಿಶೀಲನೆಗೂ ಜಿಲ್ಲಾಡಳಿತ ಮುಂದಾಗಿದೆ.ಇದನ್ನೂ ಓದಿ: ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್

Share This Article