‘ತೋತಾಪುರಿ’ ಚಿತ್ರತಂಡದಿಂದ ಪ್ರೇಕ್ಷಕರಿಗೆ ಸಿಕ್ತು ಸಿಹಿಸುದ್ದಿ- ಜನವರಿ 24ಕ್ಕೆ ಆಡಿಯೋ ಟೀಸರ್ ರಿಲೀಸ್

Public TV
2 Min Read

ನೀರ್ ದೋಸೆ ಸಿನಿಮಾ ಮೂಲಕ ಕಮಾಲ್ ಮಾಡಿರುವ ಜೋಡಿ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್. ‘ತೋತಾಪುರಿ’ ಮೂಲಕ ಮಗದೊಮ್ಮೆ ಪ್ರೇಕ್ಷಕರನ್ನು ಮನರಂಜಿಸಲು ಈ ಜೋಡಿ ಒಂದಾಗಿದ್ದು ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿರೋದು ಗೊತ್ತೇ ಇದೆ. ಟೈಟಲ್, ಟ್ಯಾಗ್ ಲೈನ್, ನವರಸ ನಾಯಕ ಜಗ್ಗೇಶ್ ಹೊಸ ಅವತಾರ ಕಂಡಿರುವ ಸಿನಿರಸಿಕರು ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ. ಅದುವೇ ‘ತೋತಾಪುರಿ’ ಚಿತ್ರದ ಮೊದಲ ಝಲಕ್.

ಹೌದು, ಫಸ್ಟ್ ಲುಕ್ ಮೂಲಕ ಸುದ್ದಿಯಲ್ಲಿದ್ದ ‘ತೋತಾಪುರಿ’ ಚಿತ್ರತಂಡ ಈಗ ಚಿತ್ರದ ಆಡಿಯೋ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಅದಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಜನವರಿ 24ರಂದು ಆಡಿಯೋ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು ಆ ಮೂಲಕ ಸಿನಿಮಾದ ಫಸ್ಟ್ ಝಲಕ್ ಚಿತ್ರರಸಿಕರ ಮುಂದಿಡಲಿದೆ ಟೀಂ ತೋತಾಪುರಿ. ಇದನ್ನೂ ಓದಿ: ಕಾಮಿಡಿ ವೀಡಿಯೋ ಝಲಕ್ ಬಿಡುಗಡೆ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದ ‘ತೋತಾಪುರಿ’ ಚಿತ್ರತಂಡ

ಸೆಟ್ಟೇರಿದ ದಿನದಿಂದ ಕುತೂಹಲ ಹುಟ್ಟುಹಾಕುತ್ತಾ ಬಂದಿರುವ ಈ ಚಿತ್ರದ ಮೇಲೆ ಪ್ರೇಕ್ಷಕರು ಹಾಗೂ ಚಿತ್ರರಂಗದ ಮಂದಿಯಲ್ಲೂ ಅಪಾರ ನಿರೀಕ್ಷೆ ಇದೆ. ತೋತಾಪುರಿ ಸಿನಿಮಾ ಎರಡು ಸೀಕ್ವೆಲ್ ನಲ್ಲಿ ತೆರೆ ಕಾಣುತ್ತಿರುವ ವಿಚಾರವನ್ನು ಚಿತ್ರತಂಡ ಈಗಾಗಲೇ ಬಹಿರಂಗ ಪಡಿಸಿದೆ. ಜೊತೆಗೆ ಎರಡು ಭಾಗದ ಚಿತ್ರೀಕರಣವನ್ನು ಮುಗಿಸಿ ಚಿತ್ರೀಕರಣಕ್ಕೂ ಕುಂಬಳಕಾಯಿ ಒಡೆದಿದೆ. ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಆ ಮೂಲಕ ‘ತೋತಾಪುರಿ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಸೌಂಡ್ ಮಾಡಲಿದೆ. ಇದೆಲ್ಲವೂ ಚಿತ್ರದ ಮೇಲೆ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯ ಸಿನಿಮಾ ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದ ಚಿತ್ರತಂಡಕ್ಕೆ ಕೊರೊನಾ ಮೂರನೇ ಅಲೆ ಬ್ರೇಕ್ ನೀಡಿದೆ. ಇದನ್ನೂ ಓದಿ: ತೋತಾಪುರಿ ಸವಿಯಲು ಸಿದ್ಧರಾಗಿ: ಜಗ್ಗೇಶ್

ಚಿತ್ರದಲ್ಲಿ ರೈತನ ಪಾತ್ರದಲ್ಲಿ ಮಿಂಚಿರುವ ನವರಸ ನಾಯಕ ಜಗ್ಗೇಶ್ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ತೆರೆ ಹಂಚಿಕೊಂಡಿದ್ದಾರೆ. ತಾರಾಬಳಗವೂ ಅಷ್ಟೇ ಕಲರ್ ಫುಲ್ ಆಗಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಒಳಗೊಂಡ ಹಲವು ಅನುಭವಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಭಿನ್ನ-ವಿಭಿನ್ನತೆಯಿಂದ ಕೂಡಿದೆ ‘ತೋತಾಪುರಿ’

ಗೋವಿಂದಾಯ ನಮಃ, ಆರ್ ಎಕ್ಸ್ ಸೂರಿ, ಶಿವಲಿಂಗ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ಮೋನಿಫ್ಲಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ‘ತೋತಾಪುರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ವಿಜಯಪ್ರಸಾದ್ ಸಾಹಿತ್ಯ, ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಇದನ್ನೂ ಓದಿ: ತೋತಾಪುರಿಗೆ 100 ಡೇಸ್ ಶೂಟಿಂಗ್!

Share This Article
Leave a Comment

Leave a Reply

Your email address will not be published. Required fields are marked *