ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ವಿಮಾನದ ಶೇ.60ರಷ್ಟು ಸೀಟುಗಳ ಆಯ್ಕೆ ಫ್ರೀ

1 Min Read

ನವದೆಹಲಿ: ವಿಮಾನಯಾನ ಸಚಿವಾಲಯ (DGCA) ದೇಶೀಯ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ವಿಮಾನಗಳಲ್ಲಿ ಸೀಟು ಆಯ್ಕೆಗಾಗಿ ಹೆಚ್ಚುವರಿ ಶುಲ್ಕದ ಭಾರ ಕಡಿಮೆ ಮಾಡಿದೆ.

ಈಗಾಗಲೇ ಕೇವಲ ಶೇ.20ರಷ್ಟು ಆಸನಗಳು ಮಾತ್ರ ಉಚಿತವಾಗಿ ಲಭ್ಯವಾಗುತ್ತಿದ್ದರೆ, ಉಳಿದ ಆಸನಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿತ್ತು. ಆದರೆ, ಈಗ ಶೇ.60ರಷ್ಟು ಆಸನಗಳನ್ನು ಉಚಿತವಾಗಿ ನೀಡುವ ಮೂಲಕ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಕನ್ನಡಿಗ ಪಡೆದಿದ್ದ ರ‍್ಯಾಂಕ್‌ ತನ್ನದೆಂದು ಹೇಳಿ ಸನ್ಮಾನ – ಬಿಹಾರದ ಯುವಕ ಅರೆಸ್ಟ್

ಇನ್ನೂ ಒಂದೇ ಪ್ರಯಾಣ ವಿವರ ಸಂಖ್ಯೆಯ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿರುವವರನ್ನು ಒಂದೇ ಸ್ಥಳದಲ್ಲಿ, ಸಾಧ್ಯವಾದರೆ ಅಕ್ಕಪಕ್ಕದಲ್ಲಿ ಕೂರಿಸುವುದು ಕಡ್ಡಾಯವಾಗಿದೆ. ಇದರಿಂದ ಕುಟುಂಬದವರು ಹಾಗೂ ಒಟ್ಟಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ. ಅಲ್ಲದೆ, ಪ್ರಯಾಣಿಕರ ಹಕ್ಕುಗಳಿಗೆ ಹೆಚ್ಚಿನ ಮಹತ್ವ ನೀಡಿರುವ ಕೇಂದ್ರ ಸರ್ಕಾರ, ವಿಮಾನ ವಿಳಂಬ, ರದ್ದುಪಡಿಸುವಿಕೆ ಹಾಗೂ ಪ್ರವೇಶ ನಿರಾಕರಣೆ ಸಂದರ್ಭಗಳಲ್ಲಿ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.

ಇದರ ಜೊತೆಗೆ, ಕ್ರೀಡಾ ಉಪಕರಣಗಳು, ಸಂಗೀತ ವಾದ್ಯಗಳನ್ನು ಸಾಗಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಸುರಕ್ಷಿತ ಹಾಗೂ ಪಾರದರ್ಶಕ ರೀತಿಯಲ್ಲಿ ಸಾಗಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಹೇಳಿದೆ. ಅಲ್ಲದೇ ಸ್ಥಳೀಯ ಭಾಷೆಗಳಲ್ಲಿ ಸಂವಹನ ಮಾಡುವಂತೆ ವಿಮಾನಯಾನ ಕಂಪನಿಗಳಿಗೆ ಡಿಜಿಸಿಎ ಸೂಚನೆ ನೀಡಿದೆ.ಇದನ್ನೂ ಓದಿ: ಸಾಲು ಸಾಲು ರಜೆ ಊರಿಗೆ ಹೊರಡುವಾಗಲೇ ಆಲಿಕಲ್ಲು ಮಳೆ – ಬೆಂಗಳೂರಿನ ಹಲವು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌

Share This Article