– ಮೆಟ್ರೋ ರೈಲುಗಳ ನಡುವಿನ ಓಡಾಟದ ಸಮಯ ಮತ್ತಷ್ಟು ಇಳಿಕೆ ನಿರೀಕ್ಷೆ
ಬೆಂಗಳೂರು: ಹಳದಿ ಮಾರ್ಗದ ಮೆಟ್ರೋ (Yellow Line Metro) ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಗುತ್ತಿದೆ. ಜ.19ರಂದು ಬೆಂಗಳೂರಿಗೆ ಎಂಟನೇ ರೈಲು ತಲುಪಲಿದೆ. ಮುಂದಿನ ದಿನಗಳಲ್ಲಿ ರೈಲಿಗಾಗಿ ಮೆಟ್ರೋ ಪ್ರಯಾಣಿಕರು ಕಾಯೋ ಸಮಯ ಕಡಿಮೆಯಾಗಲಿದೆ.
ನಮ್ಮ ಮೆಟ್ರೋ (Namma Metro) ಬೆಂಗಳೂರಿನಾದ್ಯಂತ ತನ್ನ ಕದಂಬ ಬಾಹುಗಳನ್ನು ಚಾಚಿದೆ. ಈಗಾಗಲೇ ಬೇರೆ ಬೇರೆ ಲೈನ್‌ಗಳಲ್ಲೂ ಕಾಮಗಾರಿ ಭರದಿಂದ ಸಾಗಿದೆ. ಆಗಸ್ಟ್ 10ರಂದು ಉದ್ಘಾಟನೆಯಾದ ಯೆಲ್ಲೋ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ನಾಳೆ (ಸೋಮವಾರ) ರಾತ್ರಿ ಎಂಟನೇ ಡ್ರೈವರ್‌ಲೆಸ್ ರೈಲು ಬೆಂಗಳೂರು ತಲುಪಲಿದೆ. ಇದರಿಂದಾಗಿ ಈ ಮಾರ್ಗದಲ್ಲಿ ರೈಲುಗಳ ನಡುವಿನ ಓಡಾಟದ ಸಮಯ ಮುಂದಿನ ತಿಂಗಳಿನಿಂದ ಮತ್ತಷ್ಟು ಕಡಿಮೆ ಆಗಲಿದೆ. ಸದ್ಯ 10 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚರಿಸುತ್ತಿದ್ದು, ಮತ್ತಷ್ಟು ರೈಲು ಓಡಾಟದ ಸಮಯ ಇಳಿಯಲಿದೆ. ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ – ಲಕ್ನೋದಲ್ಲಿ ತುರ್ತು ಭೂಸ್ಪರ್ಶ
ಈ ಎಂಟನೇ ರೈಲು ಜ.19ರಂದು ರಾತ್ರಿ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಲಿದೆ. ನಂತರ ಈ ರೈಲಿನ ಟೆಸ್ಟಿಂಗ್, ತಾಂತ್ರಿಕ ಪರೀಕ್ಷೆ ನಡೆಸಿ ನಂತರ ವಾಣಿಜ್ಯ ಕಾರ್ಯಾಚರಣೆಗೆ ಇಳಿಸಲು ಬಿಎಂಆರ್‌ಸಿಎಲ್ (BMRCL) ತಯಾರಿ ನಡೆಸಿದೆ. ನಂತರ ಜನರ ಓಡಾಟದ ಸಮಯ ನೋಡಿಕೊಂಡು ಡ್ಯೂರೇಷನ್ ಕಡಿಮೆ ಮಾಡುತ್ತೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅನುಮತಿಯಿಲ್ಲದೇ ಖಾಲಿ ಮನೆಯಲ್ಲಿ ನಮಾಜ್ ಮಾಡ್ತಿದ್ದ 12 ಮಂದಿ ಪೊಲೀಸ್ ವಶಕ್ಕೆ

