ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆ

Public TV
2 Min Read

ಬೆಂಗಳೂರು: `ನಮ್ಮ ಮೆಟ್ರೋ’ (Namma Metro) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ನೀಡಿದ್ದು, ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆಯಾಗಲಿದೆ. ಇನ್ನೂ ಹೊಸ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಮಾಡಲಿದೆ.

ಸಿಲಿಕಾನ್ ಸಿಟಿಯ ಟ್ರಾಫಿಕ್‌ಗೆ ಇರುವ ಒಂದೇ ಒಂದು ಪರಿಹಾರವೆಂದರೆ ಅದು ನಮ್ಮ ಮೆಟ್ರೋ. ಇದೀಗ ಬಿಎಂಆರ್‌ಸಿಎಲ್ (BMRCL) ಬೆಂಗಳೂರು ಜನರಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗಿದೆ.ಇದನ್ನೂ ಓದಿ: 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

ಹೌದು, ನಮ್ಮ ಮೆಟ್ರೋ ರೈಲು ಈಗಾಗಲೇ ಸರಿಸುಮಾರು 76 ಕಿ.ಮೀ. ಸೇವೆಯನ್ನು ನೀಡುತ್ತದೆ. ಇದರಲ್ಲಿ ಹಸಿರು ಮಾರ್ಗದಲ್ಲಿ ಮಾದವಾರದಿಂದ ಸಿಲ್ಕ್ ಬೋರ್ಡ್ ಹಾಗೂ ನೇರಳೆ ಮಾರ್ಗದಲ್ಲಿ ಚಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ಪ್ರತಿನಿತ್ಯ ಸರಾಸರಿ 7 ಲಕ್ಷ ಪ್ರಯಾಣಿಕರು ಮೆಟ್ರೋಸೇವೆಯ ಉಪಯೋಗ ಪಡೆಯುತ್ತಿದ್ದಾರೆ. ಪೀಕ್ ಟೈಮ್‌ನಲ್ಲಿ ಮೆಟ್ರೋದಲ್ಲಿ ಜನಜಾತ್ರೆಯಂತೆ ಇರುತ್ತದೆ.

ಇನ್ನೂ ನಮ್ಮ ಮೆಟ್ರೋದಲ್ಲಿ ಈಗಾಗಲೇ 57 ಮೆಟ್ರೋ ರೈಲು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಪ್ರತಿನಿತ್ಯ 55 ರೈಲುಗಳು ಸಾರ್ವಜನಿಕ ಸೇವೆ ನೀಡುತ್ತಿದ್ದು, ಇನ್ನೂಳಿದ ಎರಡು ರೈಲುಗಳನ್ನು ತುರ್ತುಪರಿಸ್ಥಿತಿಗಾಗಿ ಉಳಿಸಿಕೊಳ್ಳಲಾಗಿದೆ. ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದ ಟೆಂಡರ್ ಪ್ರಕ್ರಿಯೆ ಸಮಯದಲ್ಲಿ ಒಟ್ಟು 78 ರೈಲುಗಳನ್ನು ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದನ್ವಯ ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ನಮ್ಮ ಮೆಟ್ರೋಕ್ಕೆ ಸೇರ್ಪಡೆಯಾಗಲಿದೆ.

ಇದರಿಂದ ನಮ್ಮ ಮೆಟ್ರೋ ಎರಡು ಮಾರ್ಗದ ಜನ ದಟ್ಟಣೆಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಹಳಿಗೆ ಇಳಿಯುವುದರಿಂದ ಈಗಿನ ಸಮಯದ ಅಂತರವನ್ನು ಇನ್ನಷ್ಟು ಕಡಿಮೆ ಮಾಡಿ ಪ್ರತಿ 3, 3:05 ನಿಮಿಷಕ್ಕೆ ಒಂದೊಂದು ರೈಲು ಸಂಚಾರ ಮಾಡಲಿದೆ. ಇದು ಫೀಕ್ ಟೈಮ್‌ನಲ್ಲಿ ಜನಜಂಗುಳಿಯನ್ನು ತಪ್ಪಿಸಲು ಅನೂಕುಲ ಆಗಲಿದೆ. ಸದ್ಯ ಪ್ರತಿ 5 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚಾರ ಮಾಡುತ್ತಿದ್ದು, ಹೊಸ ರೈಲುಗಳು ಸೇರ್ಪಡೆಯಾದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ಮೆಟ್ರೋ ಸಂಚಾರ ಮಾಡಲಿದೆ.

ಒಟ್ಟಿನಲ್ಲಿ ಮುಂದಿನ ಜನವರಿಯಿಂದ ಹಂತಹಂತವಾಗಿ 21 ಹೊಸ ಮೆಟ್ರೋ ರೈಲುಗಳು ಹಸಿರು ಮತ್ತು ನೇರಳೆ ಮಾರ್ಗಕ್ಕೆ ಬರುವುದರಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ.ಇದನ್ನೂ ಓದಿ: ಬೀಡಿ, ಗುಟ್ಕಾ ಬೇಕು: ಕಲಬುರಗಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಂದ ಪ್ರತಿಭಟನೆ

Share This Article