ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮೇ ತಿಂಗಳಲ್ಲಿ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತ

1 Min Read

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದ್ದು, ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ ಸಂಚಾರಕ್ಕೆ ಮುಕ್ತವಾಗಲಿದೆ.

ಪಿಂಕ್ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಬಿಎಂಆರ್‌ಸಿಎಲ್ ತಯಾರಿ ಆರಂಭಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಆರ್‌ಡಿಎಸ್‌ಓ ತಪಾಸಣೆ ನಡೆಸಲಿದೆ. ಅಧಿಕಾರಿಗಳು ರೈಲಿನ ಸ್ಪೀಡ್ ಮತ್ತು ಲೋಡ್ ಟೆಸ್ಟ್ ಜೊತೆಗೆ ಟ್ರ‍್ಯಾಕ್ ಟೆಸ್ಟ್, ಸ್ಟೇಷನ್‌ಗಳ ತಪಾಸಣೆ, ಪವರ್ ಚೆಕ್ಕಿಂಗ್ ಸೇರಿ ಹಲವು ಬಗೆಯ ಪರೀಕ್ಷೆಗಳನ್ನು ನಡೆಸಲಿದ್ದಾರೆ. ತಪಾಸಣೆ ಪೂರ್ಣಗೊಂಡ ನಂತರ, ರೈಲ್ವೆ ಮಂಡಳಿಯ ತಾಂತ್ರಿಕ ಅನುಮೋದನೆ ಪಡೆಯಲು ಬಿಎಂಆರ್ಸಿಎಲ್ ವರದಿಯನ್ನು ಸಲ್ಲಿಸಲಿದೆ. ಇದನ್ನೂ ಓದಿ:ಟ್ರಂಪ್‌ ಹೇಳಿಕೆಯಿಂದ ಕಚ್ಚಾ ತೈಲದ ಬೆಲೆ ದಿಢೀರ್‌ ಭಾರೀ ಇಳಿಕೆ – ಈಗ ಮತ್ತೆ ಏರಿಕೆ

ಅಂತಿಮ ಪರಿಶೀಲನೆ ನಡೆಸಲು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರನ್ನು ಆಹ್ವಾನಿಸಲಿದ್ದಾರೆ. ಸೇಫ್ಟಿ ಕಮಿಷನ್ ಪರಿಶೀಲನೆ ಬಳಿಕ ಮೇ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಒಟ್ಟು 21.26 ಕಿ.ಮೀ ಮಾರ್ಗ ಇದ್ದಾಗಿದ್ದು, ಸದ್ಯಕ್ಕೆ 7.5 ಕಿ.ಮೀ ಉದ್ದ ತಾವರೆಕೆರೆ ಮತ್ತು ಕಾಳೇನ ಅಗ್ರಹಾರ ನಡುವಿನ ಎಲಿವೇಡೆಡ್ ಮಾರ್ಗ ಓಪನ್ ಆಗಲಿದೆ. ಉಳಿದ 13 ಕಿ.ಮೀ ಅಂಡರ್ ಗ್ರೌಂಡ್ ಮಾರ್ಗದ ಕಾಮಗಾರಿ ಮುಂದುವರಿದಿದೆ.

Share This Article