ಶೂಟಿಂಗ್ ಹಂತದಲ್ಲಿರುವಾಗಲೇ ಫ್ಯಾನ್ಸ್‌ಗೆ ಹಬ್ಬದೂಟ ಬಡಿಸಲು ಕಿಚ್ಚ ಸುದೀಪ್ (Kichcha Sudeep) ಸಜ್ಜಾಗಿದ್ದಾರೆ. ಮಾರ್ಕ್ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ಶೀಘ್ರದಲ್ಲೇ ರಿಲೀಸ್ ಆಗಲಿದೆ ಎಂಬ ಸುದ್ದಿಯನ್ನ ಎಕ್ಸ್ ಖಾತೆಯಲ್ಲಿ ಸುದೀಪ್ ಹಂಚಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಕಿಚ್ಚ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಕಳೆದ ಸೆ.2ರಂದು ಕಿಚ್ಚನ ಮುಂದಿನ ಚಿತ್ರದ ಟೈಟಲ್ ರಿವೀಲ್ ಆಗಿತ್ತು. ಇದರ ಬೆನ್ನಲ್ಲೇ ಸುದೀಪ್ ಫಸ್ಟ್ ಸಾಂಗ್ ಎಂಟ್ರಿಯ ಸುದ್ದಿ ಘೋಷಿಸಿರುವುದು ಫ್ಯಾನ್ಸ್ ಖುಷಿಯನ್ನ ಹೆಚ್ಚಿಸಿದೆ. ಡಿಸೆಂಬರ್ 25ಕ್ಕೆ ಮಾರ್ಕ್ ಸಿನಿಮಾ (Mark Cinema) ರಿಲೀಸ್ ಆಗಲಿದ್ದು, ಸೆಟ್ಟೇರಿದ ದಿನವೇ ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆಯಾಗಿತ್ತು. ಇಟ್ಟ ಹೆಜ್ಜೆ ಹಿಂದಕ್ಕಿಡದ ಸುದೀಪ್ ಯಾವುದೇ ಸಿನಿಮಾ ಎದುರು ನಿಂತರೂ ಅದೇ ದಿನ ತೆರೆಗೆ ತರೋದಾಗಿ ಮತ್ತೊಮ್ಮೆ ಖಚಿತಪಡಿಸಿದ್ದರು. ಇದೀಗ ಮೊದಲ ಹಾಡನ್ನ ರಿಲೀಸ್ ಮಾಡುವ ಮೂಲಕ ಮಗದೊಮ್ಮೆ ಸಿನಿಮಾ ರೆಡಿ ಎಂಬ ಸಿಗ್ನಲ್ ಕೊಡಲು ಹೊರಟಿದ್ದಾರೆ ಸುದೀಪ್.
ಮಾರ್ಕ್ ಚಿತ್ರದ ಈ ಹಾಡು ಕೆಲವೇ ದಿನಗಳಲ್ಲಿ ಎಂಟ್ರಿ ಕೊಡಲಿದೆ. ಅಜನೀಶ್ ಲೋಕನಾಥ್ ಸಂಗೀತದ ಜೊತೆ ಶೋಭಿನ್ ಮಾಸ್ಟರ್ ಕೋರಿಯೋಗ್ರಫಿಯಲ್ಲಿ ಕಿಚ್ಚನ ಮಾಸ್ ಹೆಜ್ಜೆ ನೋಡಬಹುದು. ಮ್ಯಾಕ್ಸ್ ಚಿತ್ರದ ಸಕ್ಸಸ್ ಜರ್ನಿ ಬಳಿಕ ಅದೇ ರೂಪದಲ್ಲಿ ಬರ್ತಿರುವ ಮಾರ್ಕ್ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ಕಳೆದ ಬಾರಿ ಡಿಸೆಂಬರ್‌ನಲ್ಲೇ ಮ್ಯಾಕ್ಸ್ ರಿಲೀಸ್ ಆಗಿತ್ತು. ಅದೇ ವೇಳೆಗೆ ಅಂಥದ್ದೇ ಮಾಸ್ ಜಬರ್ದಸ್ತ್ ಸಿನಿಮಾ ಅದೇ ಟೀಮ್ ಜೊತೆಗಿನ ಸಿನಿಮಾ ಮಾರ್ಕ್ ತೆರೆ ಕಾಣಲು ಸಿದ್ಧವಾಗಿದೆ. ಅಧಿಕೃತ ಪ್ರಚಾರವೂ ಶುರುವಾಗಿರೋದ್ರಿಂದ ಕಿಚ್ಚ ಫ್ಯಾನ್ಸ್‌ಗೆ ಇದು ಹಬ್ಬ ಮಾಡುವ ಸುದ್ದಿ.