ನವದೆಹಲಿ/ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧ (Middle East War) ತೀವ್ರಗೊಳ್ಳುತ್ತಿದ್ದಂತೆ ಬೆಂಗಳೂರು ನಗರದಲ್ಲಿ ಸಿಲಿಂಡರ್ ಅಭಾವ ಹೆಚ್ಚಾಗ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರ (Central Govt) ರಾಜ್ಯಗಳಿಗೆ ಗುಡ್‌ನ್ಯೂಸ್ ನೀಡಿದ್ದು, ಹೆಚ್ಚುವರಿಯಾಗಿ 20% ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡುವುದಾಗಿ ತಿಳಿಸಿದೆ.
ಕಮರ್ಷಿಯಲ್ ಗ್ಯಾಸ್ ಸಮಸ್ಯೆಯಿಂದಾಗಿ ಹೋಟೆಲ್‌ಗಳಿಗೆ ಬೀಗ ಬಿದ್ದಿದೆ. ಕೆಲವೆಡೆ ಬ್ಲ್ಯಾಕ್‌ನಲ್ಲಿ ಸಿಲಿಂಡರ್ ಕೊಂಡು ಹೋಟೆಲ್ ನಡೆಸ್ತಿದ್ದಾರೆ. ಮೆಜೆಸ್ಟಿಕ್‌ನ ಉಡುಪಿ ಆತಿಥ್ಯ ಹೋಟೆಲ್ ವಾರದಿಂದಲೂ ಕ್ಲೋಸ್ ಆಗಿದೆ. ಹೋಟೆಲ್ ಉದ್ಯಮಕ್ಕೆ ಬರೋಬ್ಬರಿ 200 ಕೋಟಿ ರೂ. ನಷ್ಟ ಆಗಿರೋದಾಗಿ ಹೋಟೆಲ್ ಅಸೋಸಿಯೇಷನ್ ಮಾಹಿತಿ ನೀಡಿದೆ. ಸರ್ಕಾರ ಬರೀ 10% ಗ್ಯಾಸ್ ಪೂರೈಕೆ ಮಾಡೋದಕ್ಕೆ ಸೂಚನೆ ನೀಡಿದೆ. ಇದ್ರಿಂದ ಹೋಟೆಲ್ ಉದ್ಯಮ ನಡೆಸೋದು ಕಷ್ಟ ಅಂದಿದ್ದಾರೆ. ಇದನ್ನೂ ಓದಿ: ಇರಾನ್‌ನಿಂದ ತೈಲ ಖರೀದಿಸುತ್ತಾ ಭಾರತ? – ವಾಷಿಂಗ್ಟನ್, ಕೇಂದ್ರದ ನಿರ್ದೇಶನಗಳಿಗೆ ಸಂಸ್ಕರಣಾ ಕಂಪನಿಗಳು ವೆಯ್ಟಿಂಗ್
ಇದೆಲ್ಲದರ ನಡುವೆ ಕೇಂದ್ರ ಸರ್ಕಾರ ಹೋಟೆಲ್‌ಗಳಿಗೆ ಗುಡ್‌ನ್ಯೂಸ್ ನೀಡಿದೆ. ಕೇಂದ್ರದಿಂದ ರಾಜ್ಯಗಳಿಗೆ 20% ಗ್ಯಾಸ್ ಸಿಲಿಂಡರ್ ಹೆಚ್ಚುವರಿ ಸಪ್ಲೈ ಆಗಲಿದೆ. ಹೋಟೆಲ್, ಡಾಬಾ, ರೆಸ್ಟೋರೆಂಟ್, ಇಂಡಸ್ಟ್ರಿಯಲ್ ಕ್ಯಾಂಟಿನ್, ಡೈರಿ, ಕಮ್ಯುನಿಟಿ ಕಿಚನ್‌ಗೆ ಸಿಲಿಂಡರ್ ಸಪ್ಲೈ ಆಗಲಿದ್ದು, ಎರಡು ವಾರಗಳಿಂದ ಪರದಾಟಕ್ಕೆ ಕೊಂಚ ರಿಲೀಫ್ ಸಿಗಲಿದೆ.
ಇನ್ನು ಗ್ಯಾಸ್ ಅಭಾವದ ಮಧ್ಯೆ ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ದಿನವೇ ಕಿಡಿಗೇಡಿಗಳು ಎರಡು ಸಿಲಿಂಡರ್ ಕಳವು ಮಾಡಿದ್ದಾರೆ. ಬೇಗೂರು ಬಳಿಯ ಆರ್‌ಸಿ ಲೇಔಟ್‌ನ ವಿಶ್ವಪ್ರಿಯ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇದನ್ನೂ ಓದಿ: ಶಿವೈಕ್ಯ ಶಿವಕುಮಾರ ಶ್ರೀಗಳ ಜಯಂತಿ – ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಮುರ್ಮು

