‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌; 3 ತಿಂಗಳ ಹಣ ಬಾಕಿ – ಶುಕ್ರವಾರ ಖಾತೆಗೆ ಹಣ

Public TV
1 Min Read

ಬೆಂಗಳೂರು: ಸಾಲು ಸಾಲು ಟೀಕೆ, ಆಕ್ರೋಶದ ನಂತರ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಮೂರು ತಿಂಗಳಿಂದ ಬಂದ್ ಆಗಿದ್ದ ಗೃಹಲಕ್ಷ್ಮಿ ಜಮೆ ಪ್ರಕ್ರಿಯೆಗೆ ನಾಳೆ ಮರು ಚಾಲನೆ ಸಿಗಲಿದೆ.

ನಾಳೆ ನವೆಂಬರ್ ತಿಂಗಳ ದುಡ್ಡು ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಡಿಸೆಂಬರ್ ತಿಂಗಳ ದುಡ್ಡನ್ನು ಮುಂದಿನ ಸೋಮವಾರ ಫಲಾನುಭವಿಗಳ ಖಾತೆಗೆ ಹಾಕುವ ಕೆಲಸ ಆಗಲಿದೆ.

ಗೃಹಲಕ್ಷ್ಮಿ ಹಣ ಸ್ಥಗಿತವಾದ ಬಗ್ಗೆ ‘ಪಬ್ಲಿಕ್ ಟಿವಿ’ ಸತತವಾಗಿ ವರದಿ ಬಿತ್ತರಿಸಿತ್ತು. ಅಂದ ಹಾಗೇ, ಹಣ ಜಮೆ ಮಾಡುವ ಪ್ರಕ್ರಿಯೆಯನ್ನು ಬದಲಾವಣೆ ಮಾಡಿದ ಕಾರಣ ಸ್ವಲ್ಪ ವಿಳಂಬ ಆಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿಕೊಂಡಿದೆ.

ಇನ್ಮುಂದೆ ಗೃಹಲಕ್ಷ್ಮಿ ಹಣ ತಾಲೂಕು ಪಂಚಾಯತ್ ಇಓಗಳ ಮೂಲಕ ಬಿಡುಗಡೆ ಆಗಲಿದೆ.

Share This Article