ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್ – ಮುಂದಿನ ವಾರದಿಂದ ಟ್ರ‍್ಯಾಕಿಗಿಳಿಯಲಿದೆ ನಾಲ್ಕನೇ ರೈಲು

By
1 Min Read

ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ನೀಡಿದ್ದು, ಮುಂದಿನ ವಾರದಿಂದಲೇ ನಾಲ್ಕನೇ ರೈಲು ಟ್ರ‍್ಯಾಕಿಗಿಳಿಯಲಿದೆ.

ಹೌದು, ನಮ್ಮ ಮೆಟ್ರೋದ (Namma Metro) ಯೆಲ್ಲೋ ಲೈನ್‌ನಲ್ಲಿ (Yellow Line) ಪ್ರಸ್ತುತ ಕೇವಲ ಮೂರು ರೈಲುಗಳು ಮಾತ್ರ ಸಂಚರಿಸುತ್ತಿವೆ. ಈ ಹಿನ್ನೆಲೆ ಪ್ರಯಾಣಿಕರು ಒಂದು ಮೆಟ್ರೋಗಾಗಿ 25 ನಿಮಿಷ ಕಾಯಬೇಕಿದೆ. ಸದ್ಯ ಬಿಎಂಆರ್‌ಸಿಎಲ್ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈಗಾಗಲೇ ನಾಲ್ಕನೇ ರೈಲು ಬೆಂಗಳೂರಿಗೆ (Bengaluru) ಆಗಮಿಸಿದ್ದು, ಸೆಪ್ಟೆಂಬರ್ ಎರಡನೇ ವಾರದಲ್ಲಿಯೇ ಟ್ರ‍್ಯಾಕಿಗಿಳಿದು ಕಾರ್ಯಾರಂಭಿಸಲಿದೆ. ಈ ಮೂಲಕ ಪ್ರತಿ 15 ರಿಂದ 20 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿವೆ.ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಕೆಜಿಎಫ್ ಬಾಬುಗೆ ಲೋಕಾಯುಕ್ತ ನೋಟಿಸ್

ಆ.11ರಿಂದ ನಮ್ಮ ಮೆಟ್ರೋದ ಮೂರು ಮಾರ್ಗದಲ್ಲಿ ಪ್ರತಿ ದಿನ 10 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಆದರೆ ಯೆಲ್ಲೋ ಲೈನ್‌ನಲ್ಲಿ ಕೇವಲ ಮೂರು ರೈಲುಗಳಿರುವ ಕಾರಣದಿಂದಾಗಿ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ನಾಲ್ಕನೇ ರೈಲು ಸೇರ್ಪಡೆಗೊಂಡ ನಂತರ ಅಕ್ಟೋಬರ್ ತಿಂಗಳಲ್ಲಿ ಕೋಲ್ಕತ್ತಾದಿಂದ ಐದನೇ ರೈಲು ಕೂಡ ಆಗಮಿಸಲಿದೆ. ನಂತರ ಪ್ರತಿ ತಿಂಗಳು ಒಂದರಂತೆ ಮೆಟ್ರೋ ರೈಲು ಸೆಟ್ ನಮ್ಮ ಮೆಟ್ರೋಗೆ ಸೇರ್ಪಡೆಯಾಗಲಿದೆ.

2026ರ ಮಾರ್ಚ್ ವೇಳೆಗೆ ಯೆಲ್ಲೋ ಲೈನ್‌ನ ಎಲ್ಲಾ ರೈಲುಗಳು ಆಗಮಿಸಿ ಕಾರ್ಯಾರಂಭಿಸಲಿದ್ದು, ಆ ಬಳಿಕ ಗ್ರೀನ್ ಮತ್ತು ಪರ್ಪಲ್ ಲೈನ್ ರೀತಿಯಲ್ಲಿ ಯೆಲ್ಲೋ ಲೈನ್‌ನಲ್ಲಿಯೂ ಕೂಡ ಐದು ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸಲಿವೆ.ಇದನ್ನೂ ಓದಿ:‘ಮಹಾನ್’ ಚಿತ್ರ ಒಪ್ಪಿಕೊಂಡ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ

Share This Article