ಪೊಲೀಸ್ ರೈಡ್ ವೇಳೆ ಹೋಟೆಲ್ ಕಿಟಕಿಯಿಂದ ನಟ ಶೈನ್ ಟಾಮ್ ಚಾಕೊ ಪರಾರಿ

Public TV
1 Min Read

ಲಯಾಳಂ ನಟ ಶೈನ್ ಟಾಮ್ ಚಾಕೊ (Shine Tom Chacko) ಮೇಲೆ ಡ್ರಗ್ಸ್ (Drugs) ಸೇವಿಸಿರುವ ಆರೋಪ ಕೇಳಿ ಬಂದಿದೆ. ಹಿನ್ನೆಲೆ ನಟ ತಂಗಿದ್ದ ಹೋಟೆಲ್‌ಗೆ ಕೇರಳದ ಕೊಚ್ಚಿ ಪೊಲೀಸರು ದಾಳಿ ನಡೆಸುತ್ತಿರುವ ಸುಳಿವು ಸಿಕ್ತಿದ್ದಂತೆ ಶೈನ್ ಟಾಮ್ ಚಾಕೊ ಪರಾರಿಯಾಗಿದ್ದಾರೆ. ಇದನ್ನೂ ಓದಿ:ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಟ್ರು ರಂಜನಿ ರಾಘವನ್

ಇತ್ತೀಚೆಗೆ ಶೈನ್ ಟಾಮ್ ಚಾಕೊ ಶೂಟಿಂಗ್ ಸೆಟ್‌ನಲ್ಲಿ ಡ್ರಗ್ಸ್ ಸೇವನೆ ಮಾಡುತ್ತಾರೆ ಎಂದು ಆರೋಪಿಸಿ ಮಲಯಾಳಂ ಚಲನಚಿತ್ರ ಸಂಘಕ್ಕೆ ನಟಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಅನ್ವಯ, ಶೈನ್ ತಂಗಿದ್ದ ಹೋಟೆಲ್‌ಗೆ ಏ.16ರಂದು ರಾತ್ರಿ ಪೊಲೀಸರು ತೆರಳಿದ್ದಾರೆ. ಪೊಲೀಸರ ದಾಳಿಗೆ ಬರುತ್ತಿರುವ ಸುಳಿವು ಸಿಕ್ತಿದ್ದಂತೆ ನಟ ರೂಮ್‌ನ ಕಿಟಕಿಯಿಂದ ಹಾರಿ ಎಸ್ಕೇಪ್ ಆಗಿದ್ದಾನೆ. ಹಾಗಾಗಿ ನಟನ ಮೇಲೆ ಅನುಮಾನ ಹೆಚ್ಚಾಗಿದೆ. ಶೈನ್ ಟಾಮ್ ಟಾಕೊ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ:ರೀಲ್ಸ್ ಕೇಸ್: ನಿನ್ನೆ ಜೈಲು ಪಾಲು – ಇಂದು ರಜತ್‌ಗೆ ಜಾಮೀನು

ಅಂದಹಾಗೆ, ಕುರುತಿ, ಆಪರೇಷನ್ ಜಾವಾ, ತಲ್ಲುಮಾಲ, ಅಡಿಯೋಸ್ ಅಮಿಗೊ, ಕುರುಪ್, ಬಜೂಕಾ ಚಿತ್ರಗಳಲ್ಲಿ ಶೈನ್ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

Share This Article