ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ

Public TV
2 Min Read

ವಾಷಿಂಗ್ಟನ್‌: ಜನರು ನಾಯಿಗಳನ್ನ (Dog) ಸಾಕುಪ್ರಾಣಿಗಳನ್ನಾಗಿ ಸಾಕಲು ಇಷ್ಟಪಡುತ್ತಾರೆ. ಬಹುತೇಕರು ತಮ್ಮ ಮನೆ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ನೋಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬರು ಮಹಿಳೆ ನಾಯಿಯನ್ನು ನೋಡಿಕೊಳ್ಳುವುದಕ್ಕಾಗಿಯೇ ಇದ್ದ ಸಿವಿಲ್‌ ಎಂಜಿನಿಯರ್‌ (Civil Enginee) ಕೆಲಸ ತೊರೆದಿದ್ದರು. ಈಗ ಅದೇ ನಾಯಿಯಿಂದ ವರ್ಷಕ್ಕೆ 8 ಕೋಟಿ ಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ನೋಡಿ…

ಇತ್ತೀಚೆಗೆ ಹೆಚ್ಚಿನ ಯುವಜನ ಸಾಮಾಜಿಕ ಮಾಧ್ಯಮವನ್ನೇ ಬಳಸಿಕೊಂಡು ಹಣ ಗಳಿಸುತ್ತಿದ್ದಾರೆ. ಅದೇ ರೀತಿ ದಂಪತಿಯೊಬ್ಬರು ತಾವು ಸಾಕಿದ ಟಕ್ಕರ್‌ ಹೆಸರಿನ ಗೋಲ್ಡನ್‌ ರಿಟ್ರೈವರ್‌ (Golden Retriever) ಶ್ವಾನದಿಂದ ವರ್ಷಕ್ಕೆ 1 ಮಿಲಿಯನ್‌ ಡಾಲರ್‌ (8.26 ಕೋಟಿ ರೂ.) ಗಳಿಸುತ್ತಿದ್ದು, ನೆಟ್ಟಿಗರನ್ನ ಬೆರಗಾಗುವಂತೆ ಮಾಡಿದೆ. ಇದನ್ನೂ ಓದಿ: ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್‌ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ

ಪೋರ್ಟ್ರೇಟ್ ಕಂಪನಿ ಪ್ರಿಂಟೆಡ್ ಪೆಟ್ ಮೆಮೊರೀಸ್‌ನ ಸಂಶೋಧನೆಯ ಪ್ರಕಾರ, ವರ್ಷಕ್ಕೆ 8.26 ಕೋಟಿ ರೂ. ಗಳಿಸುವ ಈ ಗೋಲ್ಡನ್‌ ರಿಟ್ರೈವರ್‌ ವಿಶ್ವದ ನಂ.1 ಸಾಮಾಜಿಮ ಮಾಧ್ಯಮ ಪ್ರಭಾವಶಾಲಿಗಳಲ್ಲಿ ಒಂದಾಗಿದೆ. ಜೊತೆಗೆ ಯೂಟ್ಯೂಬ್‌ನಲ್ಲಿ ಪ್ರತಿ 30 ನಿಮಿಷದ ಪ್ರೀ ರೋಲ್‌ಗೆ 40 ಸಾವಿರ ಡಾಲರ್‌ (33 ಲಕ್ಷ ರೂ.) ನಿಂದ 60 ಸಾವಿರ ಡಾಲರ್‌ (49.61 ಲಕ್ಷ ರೂ.) ಸಂಪಾದಿಸಿಕೊಡುತ್ತೆ. ಇನ್ಸ್ಟಾಗ್ರಾಮ್‌ನಲ್ಲಿ ಪ್ರತಿ 3 ರಿಂದ 8 ಸ್ಟೋರಿಗಳಿಗೆ 20 ಸಾವಿರ ಡಾಲರ್‌ (16.54 ಲಕ್ಷ ರೂ.) ಸಂಪಾದಿಸಿಕೊಡುತ್ತೆ ಎಂದು ಟಕ್ಕರ್‌ನ ಮಾಲೀಕ ಕರ್ಟ್ನಿ ಬಡ್ಜಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ

ನಾಯಿ ನೋಡಿಕೊಳ್ಳೋದಕ್ಕೆ ಎಂಜಿನಿಯರ್‌ ಕೆಲಸ ಬಿಟ್ಟರು:
ಕರ್ಟ್ನಿ ಬಡ್ಜಿನ್‌ನ ಪತ್ನಿ ಮೈಕ್‌ ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದರು. ಈಕೆ ತಾನು ಸಾಕುತ್ತಿದ್ದ ಟಕ್ಕರ್‌ ಮತ್ತು ಟಾಡ್‌ ನಾಯಿಮರಿಗಳನ್ನ ನೋಡಿಕೊಳ್ಳುವ ಸಲುವಾಗಿಯೇ ಇದ್ದ ಕೆಲಸವನ್ನ ಬಿಟ್ಟರು. 2018ರ ಜೂನ್‌ನಲ್ಲಿ ಟಕ್ಕರ್‌ 8 ವಾರಗಳ ಪುಟ್ಟ ಮರಿಯಾಗಿದ್ದಾಗ ಟಕ್ಕರ್‌ ಹೆಸರಿನಲ್ಲಿ ಇನ್ಸ್ಟಾಗ್ರಾಮ್‌ ಪುಟವೊಂದನ್ನ ತೆರೆದರು. ಬಳಿಕ ಟಕ್ಕರ್‌ನ ಮೊದಲ ವೀಡಿಯೋ ಸಖತ್‌ ಸದ್ದು ಮಾಡಿತ್ತು. ಟಕ್ಕರ್‌ಗೆ 6 ತಿಂಗಳು ತುಂಬುವುದರೊಳಗೆ ಫಾಲೋವರ್ಸ್‌ಗಳ ಸಂಖ್ಯೆ 60 ಸಾವಿರಕ್ಕೆ ತಲುಪಿತ್ತು.

ಇದೀಗ‌ ವಿಶ್ವದಾದ್ಯಂತ ವಿವಿಧೆಡೆ ಫೇಮಸ್‌ ಆಗಿರುವ ಟಕ್ಕರ್‌ ಟಿಕ್‌ಟಾಕ್‌ನಲ್ಲಿ 1.10 ಕೋಟಿ, ಯೂಟ್ಯೂಬ್‌ನಲ್ಲಿ 51 ಲಕ್ಷ, ಫೇಸ್‌ ಬುಕ್‌ನಲ್ಲಿ 43 ಲಕ್ಷ, ಇನ್ಸ್ಟಾಗ್ರಾಮ್‌ನಲ್ಲಿ 34 ಲಕ್ಷ ಹಾಗೂ ಟ್ವಿಟ್ಟರ್‌ನಲ್ಲಿ 62,400 ಫಾಲೋವರ್ಸ್‌ಗಳನ್ನ ಹೊಂದಿದೆ.

Share This Article