ಪ್ರೀತಿಸಿದವಳಿಗಾಗಿ ಅಣ್ಣನ ಮನೆಯಲ್ಲೇ ಕಳ್ಳತನ- ಕದ್ದ ಚಿನ್ನ ಅಡವಿಟ್ಟು ಗೋವಾದಲ್ಲಿ ಮಸ್ತಿ

Public TV
1 Min Read

ಬೆಂಗಳೂರು: ಪ್ರೀತಿಸಿದವಳಿಗಾಗಿ ಅಣ್ಣನ ಮನೆಯಲ್ಲೇ ಕಳ್ಳತನ (Gold Theft) ಮಾಡಿ ಬಳಿಕ ಗೋವಾದಲ್ಲಿ ಮಸ್ತಿ ಮಾಡಿದವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೊಹಮ್ಮದ್ ಇರ್ಫಾನ್ (Mohammad Irfan) ಎಂದು ಗುರುತಿಸಲಾಗಿದ್ದು, ಈತನನ್ನು ಆಡುಗೋಡಿ ಪೊಲೀಸರು (Adugodi Police) ಬಂಧಿಸಿದ್ದಾರೆ. ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ವಾಸವಿದ್ದ ಇರ್ಫಾನ್, ತಾನು ಪ್ರೀತಿಸಿದವಳ ಆಸೆ ಈಡೇರಿಸುವ ಸಲುವಾಗಿ ಅನ್ನವಿತ್ತು, ಆಶ್ರಯ ಕೊಟ್ಟ ಅಣ್ಣನ ಮನೆಯಲ್ಲೇ ತನ್ನ ಕೈಚಳಕ ತೋರಿಸಿದ್ದಾನೆ. ಪ್ರಿಯತಮೆಯ ಗೋವಾ (Goa) ಆಸೆಗೆ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದಾನೆ.

ಸುದ್ದುಗುಂಟೆಪಾಳ್ಯದಲ್ಲಿ ಸೇಲ್ಸ್ ಮನ್ ಕೆಲಸ ಮಾಡಿಕೊಂಡಿದ್ದ ಸಲ್ಮಾನ್, ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ. ಕೆಲಸವಿಲ್ಲದೇ ಓಡಾಡಿಕೊಂಡಿದ್ದ ಈತ ಮನೆಯ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ನವೆಂಬರ್ 29ರಂದು ಬೀರು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಬಯಲಾಗಿತ್ತು. 4-5 ದಿನಗಳಿಂದ ಮನೆಗೆ ಬಾರದೇ ಇದ್ದ ತಮ್ಮ ಇರ್ಫಾನ್ ವಿರುದ್ಧ ಅಣ್ಣ ದೂರು ನೀಡಿದ್ದ. ಇದನ್ನೂ ಓದಿ: ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

ದೂರಿನನ್ವಯ ತನಿಖೆ ಕೈಗೊಂಡಾಗ ಕಳ್ಳತನದಲ್ಲಿ ಇರ್ಫಾನ್ ಕೈವಾಡ ಬಯಲಾಗಿದೆ. ಮಾಡೋಕೆ ಕೆಲಸವಿಲ್ಲದಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಗೋವಾಗೆ ಹೋಗಿ ಮೋಜು-ಮಸ್ತಿ ಮಾಡುವ ಇಚ್ಛೆ ಹೊಂದಿದ್ದ ಇರ್ಫಾನ್ ನ ಪ್ರೇಯಸಿ ಅದರಂತೆ ಹಣ ಹೊಂದಿಸಲು ಮನೆಯಲ್ಲೇ ಕಳ್ಳತನ ಮಾಡಿದ್ದ. ಕದ್ದ ಚಿನ್ನಾಭರಣ ಅಡವಿಟ್ಟು ಪ್ರೇಯಸಿ ಜೊತೆ ಗೋವಾಗೆ ಹೋಗಿದ್ದ. ಗೋವಾದಲ್ಲಿದ್ದಾಗಲೇ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *