BBK 11: ದೊಡ್ಮನೆಯ 4ನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌

Public TV
1 Min Read

ದೊಡ್ಮನೆಗೆ ಉದ್ಯಮಿ, ರೈತ ಗೋಲ್ಡ್‌ ಸುರೇಶ್‌ ಕಾಲಿಟ್ಟಿದ್ದಾರೆ. ಬಿಗ್‌ ಬಾಸ್‌ ಕನ್ನಡ 11ರ (Bigg Boss Kannada 11) 4ನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌ (Gold Suresh) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:BBK 11: ದೊಡ್ಮ,ನೆ ಎಂಟ್ರಿ ಕೊಡಲಿದ್ದಾರೆ ಮೋಕ್ಷಿತಾ ಪೈ

ಗೋಲ್ಡ್‌ ಸುರೇಶ್‌ ಅವರು ಮೂಲತಃ ಉತ್ತರ ಕರ್ನಾಟಕದ ಮೂಲದವರಾಗಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಗೋಲ್ಡ್‌ ಸುರೇಶ್‌ ಚಿನ್ನದ ವ್ಯಾಪಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಮೊದಲ ಕ್ಯಾಮೆರಾ ಮುಂದೆ ಸುರೇಶ್‌ ಬಂದಿದ್ದಾರೆ. ಈ ವಿಚಾರ ರಾಜ ರಾಣಿ ಫಿನಾಲೆಯಲ್ಲಿ ಆಗಿದೆ. ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರ ಬಗ್ಗೆ ಹೆಚ್ಚಿನ ವಿವರ ಬಿಗ್‌ ಬಾಸ್‌ ಮನೆಯಲ್ಲೇ ರಿವೀಲ್‌ ಆಗಲಿದೆ.

ಇನ್ನೂ ಈಗಾಗಲೇ ಕಿರುತೆರೆ ನಟಿ ಗೌತಮಿ ಜಾದವ್‌, ಚೈತ್ರಾ ಕುಂದಾಪುರ ದೊಡ್ಮನೆಗೆ ಎಂಟ್ರಿ ಕೊಟ್ಟಾಗಿದೆ. ಇತ್ತ ಕಿರುತೆರೆ ನಟಿ ಮೋಕ್ಷಿತಾ ಪೈ ಕೂಡ ದೊಡ್ಮನೆಗೆ ಹೋಗಿರುವುದು ಪಕ್ಕಾ ಆಗಿದೆ. ಇನ್ನೂ ಯಾರೆಲ್ಲಾ ಬರಲಿದ್ದಾರೆ ಎಂಬುದನ್ನು ಕಾಯಬೇಕಿದೆ. ಸೆ.29ರಂದು ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಓಪನಿಂಗ್‌ ಆಗಲಿದೆ.

Share This Article