ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಿ- ರನ್ಯಾ ರಾವ್‌ಗೆ ಮಹಿಳಾ ಕೈದಿಗಳಿಂದಲೇ ಕಿರುಕುಳ!

Public TV
1 Min Read

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರನ್ಯಾರಾವ್‌ಗೆ (Ranya Rao) ಜೈಲಿನಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆಯಂತೆ.

ಮೊದ ಮೊದಲು ಜೈಲು, ಅಲ್ಲಿನ ಊಟ, ಸೆಟ್ ಆಗದೇ ಪರದಾಡಿದ್ದರು. ಆನಂತರ ದಿನ ಕಳೆದಂತೆ ಜೈಲಿನ ವಾತಾವರಣ, ಅಲ್ಲಿನ ಊಟ, ಅಲ್ಲಿನ ಸಿಬ್ಬಂದಿ ವರ್ತನೆಗೆ ಒಗ್ಗಿಕೊಂಡಿದ್ದಾರೆ. ಎಲ್ಲಾ ಸರಿಯಾಯ್ತು ಎನ್ನುವಷ್ಟರಲ್ಲಿ ರನ್ಯಾ ರಾವ್ ಇರುವ ಜೈಲಿನ ಬ್ಯಾರಕ್‌ನಲ್ಲಿ ಮಹಿಳಾ ಕೈದಿಗಳ ಕಾಟ ಶುರುವಾಗಿದೆ.

ರನ್ಯಾ ರಾವ್‌ಗೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಸಹ ಮಹಿಳಾ ಕೈದಿಗಳಿಂದ ಕಿರುಕುಳ ನಡೆಯುತ್ತಿದೆ ಎಂಬ ಗಂಭೀರ ಆರೋಪ ಬಂದಿದೆ. ಸಹ ಕೈದಿಗಳು ರನ್ಯಾರಾವ್‌ಗೆ ಚಿನ್ನ ಕಳ್ಳಿ, ಏನ್ ಸಮಾಚಾರ? ಹೇಗಿದೆ ಜೈಲು ಅಂತಾ ಹೀಯಾಳಿಸಿ ಮಾತನಾಡುತ್ತಿದ್ದಾರೆ. ಇದರಿಂದ ನೊಂದ ನಟಿ ರನ್ಯಾ ರಾವ್ ಜೈಲಿನ ಸಿಬ್ಬಂದಿ ಬಳಿ ಬೇರೆಯೊಂದು ಬ್ಯಾರಕ್‌ಗೆ ಶಿಫ್ಟ್ ಮಾಡಿ ಅಂತಾ ಮನವಿ ಮಾಡಿದ್ದಾಳೆ.

ರನ್ಯಾರಾವ್ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬೇರೊಂದು ಬ್ಯಾರಕ್‌ಗೆ ಶಿಫ್ಟ್ ಮಾಡಲು ಸಿದ್ದತೆ ನಡೆಸಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

Share This Article