EXCLUSIVE: ರನ್ಯಾ ಕೇಸ್‌ಗೆ ಟ್ವಿಸ್ಟ್; ನಟಿ ಒಡೆತನದ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು!

Public TV
1 Min Read

– ಪ್ರಭಾವಿ ರಾಜಕಾರಣಿಯಿಂದ ಫಟಾಫಟ್ ಭೂಮಿ ಮಂಜೂರು?
– ನಟಿ ರನ್ಯಾಗೆ ಪ್ರಭಾವಿ ರಾಜಕಾರಣಿಗಳ ನಂಟು?

ಬೆಂಗಳೂರು: ನಟಿ ರನ್ಯಾ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಮತ್ತೊಂದು ತಿರುವು ಸಿಕ್ಕಿದೆ. ನಟಿಗೆ ದೊಡ್ಡ ದೊಡ್ಡ ರಾಜಕಾರಣಿಗಳ ನಂಟಿರುವ ಶಂಕೆ ವ್ಯಕ್ತವಾಗಿದೆ.

ರನ್ಯಾ ರಾವ್‌ಗೂ ಕರ್ನಾಟಕ ರಾಜಕೀಯ ವ್ಯಕ್ತಿಗಳಿಗೂ ದೊಡ್ಡ ನಂಟಿರುವುದು ಗೊತ್ತಾಗಿದೆ. ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಕರ್ನಾಟಕ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರಾಗಿದೆ. ಇದನ್ನೂ ಓದಿ: ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್

ರನ್ಯಾ ಮತ್ತು ರಷಬ್ ಇಬ್ಬರು ಕೂಡ ಕಂಪನಿಯ ನಿರ್ದೇಶಕರು. ರನ್ಯಾ ksiroda India private limited ಎಂಬ ಕಂಪನಿಯ ನಿರ್ದೇಶಕಿಯಾಗಿದ್ದಾರೆ. ಈ ಕಂಪನಿಗೆ 2023 ರಲ್ಲಿ ಕೆಐಎಡಿಬಿಯಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ.

ಸರ್ಕಾರ ಜಮೀನು ಮಂಜೂರು ಮಾಡಿರುವ ದಾಖಲೆಯಿದೆ. ಒಬ್ಬ ನಟಿ, ನಿರ್ದೇಶಕಿಯಾಗಿರುವ ಕಂಪನಿಗೆ 12 ಎಕರೆ ಜಮೀನು ಮಂಜೂರಾಗಿದ್ದು ಹೇಗೆ ಎಂಬ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದನ್ನೂ ಓದಿ: ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

ರನ್ಯಾ ರಾವ್ ಕಂಪನಿಗೆ ಫಟಾಫಟ್ ಭೂಮಿ ಮಂಜೂರಾಗಿದೆಯೇ ಎಂಬ ಗುಮಾನಿಯು ಮೂಡಿದೆ. ರಾಜಕಾರಣಿಯೊಬ್ಬರ ಕೃಪಾಕಟಾಕ್ಷದಿಂದ ಬರೋಬ್ಬರಿ 12 ಎಕರೆ ಕೆಐಎಡಿಬಿ ಲ್ಯಾಂಡ್ ಮಂಜೂರಾಗಿದೆ.

ತುಮಕೂರಿನ ಶಿರಾದಲ್ಲಿ ಸ್ಟೀಲ್ ಕಂಪನಿಗೆ ಜಮೀನು ಮಂಜೂರಾಗಿದೆ. ಕಂಪನಿ ಸ್ಥಾಪನೆಯಾದ 9 ತಿಂಗಳಲ್ಲೇ ಸರ್ಕಾರ ಭೂಮಿ ಕೊಟ್ಟಿದೆ. 2022ರ ಏಪ್ರಿಲ್‌ನಲ್ಲಿ ಕಂಪನಿ ಸ್ಥಾಪನೆಯಾಯಿತು. 2023 ಜನವರಿಯಲ್ಲಿ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ರನ್ಯಾ ರಾವ್‌ಗಾಗಿ ಫೈಲ್ ಸ್ಪೀಡ್ ಅಪ್ ಆಗಿದ್ಯಾ? ರನ್ಯಾ ಹಿಂದಿರುವ ಆ ರಾಜಕಾರಣಿ ಯಾರು ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾಗೆ ಮತ್ತೊಂದು ಸಂಕಷ್ಟ – ಸಿಬಿಐನಿಂದ ಪ್ರತ್ಯೇಕ FIR ದಾಖಲು

Share This Article