ಹಲ್ಲೆಗೊಳಗಾದ ವಲಸೆ ಕಾರ್ಮಿಕ ಬಾಲಕನನ್ನು ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡಿಸಿದ ಚಿನ್ನದಂಗಡಿ ಮಾಲೀಕ

Public TV
1 Min Read

ತಿರುವನಂತಪುರಂ: ಕಳೆದ ತಿಂಗಳು ಕೇರಳದ (Kerala) ಕಣ್ಣೂರಿನಲ್ಲಿ (Kannur) ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ 6 ವರ್ಷದ ಬಾಲಕ (Boy) ಮತ್ತು ಆತನ ಕುಟುಂಬವನ್ನು ಚಿನ್ನದಂಗಡಿಯ ಮಾಲೀಕನೊಬ್ಬ (Gold Shop Owner) ತನ್ನ ಐಷಾರಾಮಿ ಕಾರಿನಲ್ಲಿ (luxury car) ಜಾಲಿ ರೈಡ್ ಹಾಗೂ ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಚಿನ್ನದಂಗಡಿ ಮಾಲೀಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೊಟ್ಟಾಯಂ ಮೂಲದ ಜುವೆಲ್ಲರಿ ಗ್ರೂಪ್‌ನ ಆಚಾಯನ್ಸ್ ಗೋಲ್ಡ್‌ನ ಮಾಲೀಕ ಟೋನಿ ವರ್ಕಿಚನ್ ರಾಜಸ್ಥಾನ ಮೂಲದ ವಲಸೆ ಕಾರ್ಮಿಕ ಕುಟುಂಬದ 6 ವರ್ಷದ ಬಾಲಕ ಗಣೇಶ್‌ನನ್ನು ಆತನ ಕುಟುಂಬದ ಜೊತೆಗೆ ಕೋಝಿಕ್ಕೋಡ್‌ನಾದ್ಯಂತ ನಗರದಲ್ಲಿ ಜಾಲಿ ರೈಡ್ ಕರೆದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೇ ಬಾಲಕನಿಗೆ ಬೇಕೆನಿಸಿದ್ದನ್ನೆಲ್ಲವನ್ನೂ ತೆಗೆಸಿ ಕೊಟ್ಟಿದ್ದಾರೆ.

ಕಳೆದ ತಿಂಗಳು ವಲಸೆ ಕಾರ್ಮಿಕ ಕುಟುಂಬದ ಬಾಲಕ ಕಣ್ಣೂರಿನಲ್ಲಿ ಕಾರೊಂದಕ್ಕೆ ಒರಗಿ ನಿಂತಿದ್ದಕ್ಕಾಗಿ ಕಾರ್‌ನ ಮಾಲೀಕ ಕೋಪಗೊಂಡು ಬಾಲಕನಿಗೆ ಕಾಲಿನಿಂದ ಒದ್ದಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಶಿಹಸಾದ್‌ನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯ ಬಳಿಕ ರಾಜ್ಯಾದ್ಯಂತ ವಲಸೆ ಕಾರ್ಮಿಕರ ಬಗ್ಗೆ ಹಲವರು ಅನುಕಂಪ ತೋರಿ ಅತಿಥಿ ಕೆಲಸಗಾರರು ಎಂದು ಸಂಬೋಧಿಸಿದರು. ಇದನ್ನೂ ಓದಿ: ಕಾಂತಾರ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಬಂದ ಜೋಡಿ ಮೇಲೆ ಹಲ್ಲೆ

ಈ ಘಟನೆ ನಡೆದ 1 ತಿಂಗಳ ಬಳಿಕ ಟೋನಿ ಅವರು ಹಲ್ಲೆಗೊಳಗಾದ ಬಾಲಕನನ್ನು ಗುರುತಿಸಿ, ಆತನಿಗೆ ಹಾಗೂ ಆತನ ಕುಟುಂಬದವರಿಗೆ ಜಾಲಿ ರೈಡ್ ಹಾಗೂ ಶಾಪಿಂಗ್ ಕರೆದುಕೊಂಡು ಹೋಗಲು ಮುಂದಾದರು. ಬಾಲಕನ ಕುಟುಂಬಕ್ಕೆ ಟೋನಿ 3 ತಿಂಗಳ ಕಾಲ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್- ಪೀಸ್ ಪೀಸ್ ಪ್ರೇಮಿಗೆ ಜೈಲು ಅವಧಿ ವಿಸ್ತರಣೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *