– ಬಾಗಿಲು ಮುರಿಯದೇ, ಬೀಗ ಒಡೆಯದೇ ಚಿನ್ನದ ಗಣಿ ಹೊತ್ತೊಯ್ದ ಕಳ್ಳ
ಬೆಂಗಳೂರು: ಎರಡು ಮೂರು ದಿನ ಮನೆ ಬಿಟ್ಟು ಹೊರಗೆ ಹೋಗುವ ಮುನ್ನ ಎಚ್ಚರ ವಹಿಸಬೇಕಾದ ಸ್ಟೋರಿ ಇದು. ಹೌದು. ಬರಿಗೈಯಲ್ಲಿ ಬಂದ ಕಳ್ಳನೊಬ್ಬ (Thief) ಬಾಗಿಲು ಮುರಿಯದೇ, ಬೀಗ ಒಡೆಯದೇ ಒಳಗೆ ನುಗ್ಗಿ ಚಿನ್ನದ ಗಣಿಯನ್ನೇ ದೋಚಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ವಿಂಡೋ ಓಪನ್ ಮಾಡಿ ಲಾಕ್‌ನ ಸ್ಕ್ರೂ ಬಿಚ್ಚಿ ಮಗನ ಮದುವೆಗೆ ಮನೆಯಲ್ಲಿಟ್ಟಿದ್ದ ಹಣ, ಚಿನ್ನಾಭರಣವನ್ನ (Gold Jewellery) ಹೊತ್ತೊಯ್ದಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಯಾಂಗಲ್ ಲವ್ ಸ್ಟೋರಿಗೆ ಯುವಕ ಬಲಿ
ಬಗಲಗುಂಟೆ ರಾಮಯ್ಯ ಬಡಾವಣೆಯಲ್ಲಿ ದರ್ಶನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, 45 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಮೂರು ಲಕ್ಷ ನಗದು ದೋಚಿ ಪರಾರಿಯಾಗಿದ್ದಾನೆ. ಒಂದೂವರೆ ಗಂಟೆಗಳ ಕಾಲ ಮನೆಯ ಮೂಲೆ ಮೂಲೆ ಹುಡುಕಿರುವ ಕತರ್ನಾಕ್ ಕಳ್ಳ ಬರುವಾಗ ಬರಿಗೈಲಿ ಬಂದು ವಾಪಸ್ ಆಗುವಾಗ ಬ್ಯಾಗ್ ಸಮೇತ ಹೋಗುವ ದೃಶ್ಯ ಲಭ್ಯವಾಗಿದೆ.
300 ಗ್ರಾಂ ಗೋಲ್ಡ್, 10 ಲಕ್ಷ ಬೆಲೆ ಬಾಳುವ ಬೆಳ್ಳಿ, 3ಲಕ್ಷ ನಗದು ಒಂದು ಹೊಸ ಮೊಬೈಲ್ ಬಾಕ್ಸ್ ದೋಚಿ ಪರಾರಿಯಾಗಿದ್ದಾನೆ. ಖತರ್ನಾಕ್ ಕಳ್ಳ ಬರಿಗೈಲಿ ಬಂದು ಬ್ಯಾಗ್ ತುಂಬಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೋಗಿ ಜೊತೆ ಸೆಕ್ಸ್ – ಕೆನಡಾದಲ್ಲಿ ಭಾರತ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು
ಘಟನೆ ಸಂಬಂಧ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬಗಲಗುಂಟೆ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಇದನ್ನೂ ಓದಿ: ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? – ನೂರಾರು ಗೋವುಗಳ ಎಲುಬುಗಳು ಪತ್ತೆ; ಪೊಲೀಸರಿಂದ ತನಿಖೆ