– ಬೆಂಗ್ಳೂರಲ್ಲಿ ದಾಳಿ, ಗೋಲ್ಡ್ ಗಿರಿ ಅರೆಸ್ಟ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ಪುಂಡರ ಜೊತೆ ಪೊಲೀಸಪ್ಪನ ಮಗ ಬಿಂದಾಸ್ ಹುಟ್ಟುಹಬ್ಬ ಆಚರಣೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತನನ್ನು ಎಎಸ್‍ಐ ಮಗ ಗಿರಿ ಅಲಿಯಾಸ್ ಗೋಲ್ಡ್ ಗಿರಿ, ನಾಯಿ ಗಿರಿ ಎಂದು ಗುರುತಿಸಲಾಗಿದೆ. ಈತನ ಕೊರಳಲ್ಲಿ ಚಿನ್ನದ ಸರಗಳ ರಾಶಿಯೇ ಇದೆ. ಕೇವಲ ಗಿರಿ ಕೊರಳಲ್ಲಿ ಮಾತ್ರವಲ್ಲ, ನಾಯಿಗೂ ಗೋಲ್ಡ್ ಬೆಲ್ಟ್ ಧರಿಸಲಾಗಿದೆ.
ಈತ ಮಲ್ಲತ್ತಹಳ್ಳಿಯ ನಡು ರಸ್ತೆಯಲ್ಲೇ ಅದ್ಧೂರಿಯಾಗಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಅಲ್ಲದೆ ಗೊಲ್ಡ್ ಗಿರಿಗೆ ಹುಟ್ಟಿದ ಹಬ್ಬಕ್ಕೆ ರಸ್ತೆ ಮಧ್ಯೆಯೇ ಪುಡಾರಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. ಬರ್ತ್ ಡೇ ಸಂಭ್ರಮದ ವೇಳೆ ಸಾಲು ಸಾಲು ರೌಡಿಶೀಟರ್ ಗಳು ಬಂದು ಸೆಲ್ಫಿ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಜ್ಞಾನ ಭಾರತಿ ಪೊಲೀಸರು ಬರ್ತ್ ಡೇ ಆಚರಣೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಗಿರಿ ಅಭಿಮಾನಿಗಳು ಪಾರ್ಟಿಯಿಂದ ಕಾಲ್ಕಿತ್ತಿದ್ದಾರೆ.
ಸದ್ಯ ಗಿರಿಯನ್ನ ವಶಕ್ಕೆ ಪಡೆದು ಜ್ಞಾನಭಾರತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.