ಚಿನ್ನ 10 ಗ್ರಾಂಗೆ 1.50 ಲಕ್ಷ, ಬೆಳ್ಳಿ ಕೆ.ಜಿಗೆ 3 ಲಕ್ಷ: ಸಾರ್ವಕಾಲಿಕ ದಾಖಲೆ

2 Min Read

ನವದೆಹಲಿ: ಕಳೆದ 1 ವರ್ಷದ ಅವಧಿಯಲ್ಲಿ ಚಿನ್ನದ (Gold Price) ಬೆಲೆ 70,000 ರೂ., ಬೆಳ್ಳಿ ಬೆಲೆ (Silver Price) 2 ಲಕ್ಷ ರೂ. ಏರಿಕೆಯಾಗಿದ್ದು, ಜಾಗತಿಕ ಸಂಘರ್ಷ, ಪೂರೈಕೆ ಕುಸಿತ ಹಾಗೂ ಬೇಡಿಕೆ ಹೆಚ್ಚಳದಿಂದ ದರ ಜಾಸ್ತಿಯಾಗಿದೆ.

ಚಿನ್ನ, ಬೆಳ್ಳಿ ದರ ಏರಿಕೆಯಾಗುವುದು ಮತ್ತೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಸೋಮವಾರ (ಜ.20) ಬೆಳ್ಳಿ ದರ ಕೆ.ಜಿಗೆ 3,07,900 ರೂ.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಇದೊಂದು ಕಡೆಯಾದರೆ ಮತ್ತೊಂದೆಡೆ ಚಿನ್ನದ ದರವೂ ಏರಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ 1,37,550 ರೂ. ಹಾಗೂ 24 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ 1,50,000 ರೂ.ಗೆ ಹೆಚ್ಚಳವಾಗಿದೆ. ಕಳೆದ ಒಂದು ವರ್ಷದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 70,000 ರೂ.ನಷ್ಟು ಏರಿಕೆಯಾಗಿದ್ದು, ಪ್ರತಿ ಕೆ.ಜಿ ಬೆಳ್ಳಿ ಬೆಲೆಯಲ್ಲಿ 2 ಲಕ್ಷ ರೂ. ಹೆಚ್ಚಳವಾಗಿದೆ.ಇದನ್ನೂ ಓದಿ: ರಾಸಲೀಲೆ ವಿಡಿಯೋ ವೈರಲ್ – ಡಿಜಿಪಿ ರಾಮಚಂದ್ರರಾವ್ ತಲೆದಂಡ

ಕಳೆದ ಶುಕ್ರವಾರಕ್ಕೆ (ಜ.16) ಹೋಲಿಸಿದರೆ ಚಿನ್ನ, ಬೆಳ್ಳಿ ಎರಡೂ ಕೂಡ ಏರಿಕೆಯಾಗಿದೆ. ಬೆಳ್ಳಿ 2,98,700 ರೂ.ಯಿಂದ 9,200 ರೂ. ಹಾಗೂ 22 ಕ್ಯಾರಟ್ 10 ಗ್ರಾಂ ಚಿನ್ನ 1,35,400 ರೂ.ಯಿಂದ 2,150 ರೂ., 24 ಕ್ಯಾರಟ್ ಚಿನ್ನ 10 ಗ್ರಾಂಗೆ 1,47,700 ರೂ.ಯಿಂದ 2,300 ರೂ. ಹೆಚ್ಚಳವಾಗಿದೆ.

ಇನ್ನೂ ರಾಷ್ಟ್ರರಾಜಧಾನಿ ದೆಹಲಿಯಲ್ಲಿಯೂ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ ಕಂಡಿದೆ. ಬೆಳ್ಳಿ 10 ಗ್ರಾಂಗೆ 10,000 ರೂ. ಏರಿಕೆಯಾಗಿ 3,02,600 ರೂ.ಗೆ ತಲುಪಿದೆ. ಇನ್ನೂ 10 ಗ್ರಾಂ ಚಿನ್ನ 1,900 ರೂ. ಹೆಚ್ಚಳವಾಗಿ 1,48,100 ರೂ.ಗೆ ತಲುಪಿದೆ.ಇದನ್ನೂ ಓದಿ: ಲೀಟರ್‌ ಹಾಲು 175 ರೂ., ಕೆಜಿ ಟೊಮೆಟೊ 185 – ಭಾರತಕ್ಕಿಂತ 3 ಪಟ್ಟು ಕುಸಿದ ಕರೆನ್ಸಿ, ವೆನೆಜುವೆಲಾಗೆ ತೈಲ ಸಂಪತ್ತು ಅರೆಬಹುದೇ ಮದ್ದು?

ಏರಿಕೆಗೆ ಕಾರಣ:

  • ಇರಾನ್, ಗ್ರೀನ್ ಲ್ಯಾಂಡ್ ಮೇಲೆ ಅಮೆರಿಕ ದಾಳಿಯ ಭೀತಿಯಿಂದ ಎಲ್ಲೆಡೆ ಆತಂಕ
  • ಅಮೆರಿಕ- ಯುರೋಪ್ ನಡುವೆ ತೆರಿಗೆ ಸಮರದ ಕಾರಣ ವ್ಯಾಪಾರದ ಬಿಕ್ಕಟ್ಟಿನ ಭೀತಿ
  • ಷೇರುಪೇಟೆ ಬಿಟ್ಟು ಚಿನ್ನ ಮತ್ತು ಬೆಳ್ಳಿಯತ್ತ ಸಾಂಸ್ಥಿಕ ಹೂಡಿಕೆದಾರರ ಗಮನ ಹೆಚ್ಚಿದೆ
  • ಕೈಗಾರಿಕಾ ವಲಯದಿಂದ ಬೆಳ್ಳಿಗೆ ಭಾರೀ ಬೇಡಿಕೆ ಕಾರಣ ದರ ಭಾರೀ ಏರಿಕೆ
  • ನಿರೀಕ್ಷಿತ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಉತ್ಪಾದನೆ ಇಲ್ಲ, ಮತ್ತೊಂದೆಡೆ ಎರಡೂ ಲೋಹಗಳಿಗೆ ಬೇಡಿಕೆ ಏರಿಕೆ.

Share This Article