ಮಂಗಳೂರಿನಲ್ಲಿ ಹುಲಿ ವೇಷಧಾರಿಗಳಿಂದ ದೇವಿ ಸೇವೆ

Public TV
2 Min Read

ಮಂಗಳೂರು: ಕಾಡಿನಲ್ಲಿರಬೇಕಾದ ನೂರಾರು ಹುಲಿಗಳು ನಾಡಿಗೆ ಬಂದಿದೆ. ನಗರದ ಎಲ್ಲೆಂದರಲ್ಲಿ ಆ ಹುಲಿಗಳು ಓಡಾಡುತ್ತಿತ್ತು. ಆದರೆ ಯಾರಿಗೂ ಯಾವುದೇ ರೀತಿಯ ತೊಂದರೆಗಳನ್ನು ಮಾಡಿಲ್ಲ. ಮಾತ್ರವಲ್ಲದೆ ವಾದ್ಯಗೋಷ್ಟಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ಕಸರತ್ತುಗಳನ್ನೂ ಮಾಡುತ್ತಿದ್ದವು.

ಹೌದು. ನವರಾತ್ರಿಯ ಸಂದರ್ಭದಲ್ಲಿ ತುಳುನಾಡಿನಲ್ಲಿ ಕಾಣಸಿಗುವ ಮಾನವ ವೇಷಧಾರಿ ಹುಲಿಗಳಿವು. ಈ ಹಿಂದೆ ಸ್ವರ್ಗಲೋಕದಲ್ಲಿ ರಾಕ್ಷಸ ಹಾವಳಿ ಜಾಸ್ತಿಯಾಗಿ ದೇವತೆಗಳೆಲ್ಲಾ ಭೂಲೋಕಕ್ಕೆ ಇಳಿದ್ದರು. ಆದರೆ ಇಲ್ಲೂ ದಾನವರ ಕಿರುಕುಳ ಹೆಚ್ಚಾಗಿದ್ದು ದೇವತೆಗಳೆಲ್ಲಾ ಆದಿಶಕ್ತಿಯ ಮೊರೆ ಹೋಗುತ್ತಾರೆ. ಈ ಸಂದರ್ಭದಲ್ಲಿ ದೇವತೆಗಳೆಲ್ಲಾ ಬೇರೆ ಬೇರೆ ಪ್ರಾಣಿ ಪಕ್ಷಿಗಳ ರೂಪ ತಾಳಿ ದಾನವರ ವಧೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ದೇವಿಗೆ ವಾಹನವಾಗಿ ಸಹಕರಿಸಿದ್ದು ಹುಲಿ. ಹೀಗಾಗಿ ನವರಾತ್ರಿಯ ದಿನಗಳಲ್ಲಿ ಇಂದಿಗೂ ತುಳುನಾಡಿನ ಜನ ಹುಲಿಯ ವೇಷಗಳನ್ನು ಹಾಕಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಅನ್ನೋದು ನಂಬಿಕೆ.

ಇಷ್ಟು ಮಾತ್ರವಲ್ಲದೆ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ರೋಗ-ರುಜಿನಗಳು ಬಂದಾಗ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿಸುತ್ತೇವೆ ಎಂದು ಹಿರಿಯರು ಹರಕೆ ಹೇಳುತ್ತಿದ್ದರು. ಅದರಂತೆ ಇಂದಿಗೂ ವಿವಿಧ ವೇಷಗಳನ್ನು ಇಲ್ಲಿಯ ಜನ ನವರಾತ್ರಿಯ ಸಂದರ್ಭದಲ್ಲಿ ಹಾಕಿ ಸೇವೆ ಸಲ್ಲಿಸುತ್ತಾರೆ. ಅದರಲ್ಲೂ ಪ್ರಮುಖವಾಗಿ ಹುಲಿ ವೇಷದಾರಿಗಳೇ ಹೆಚ್ಚಾಗಿ ಕಾಣಸಿಗುತ್ತಾರೆ. ಜೊತೆಗೆ ಹಿಂದಿನ ಕಾಲದಲ್ಲಿ ಕಾಡಿನ ಹುಲಿಗಳು ನಾಡಿಗೆ ಬಂದು ದಾಳಿ ಮಾಡುತ್ತಿತ್ತು. ಇದನ್ನೂ ಓದಿ: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ- ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ

ಈ ಸಂದರ್ಭವೂ ದೇವಿಗೆ ಹರಕೆ ರೂಪರದಲ್ಲಿ ಹುಲಿ ವೇಷ ಹಾಕುತ್ತೇವೆ ಎಂದು ಹರಕೆ ಹೇಳುತ್ತಿದ್ದರು. ಈ ರೀತಿಯಾಗಿ ಹುಲಿ ವೇಷಗಳ ತಂಡಗಳು ಕೆಲವೊಂದು ದೇವಸ್ಥಾನ, ಅಂಗಡಿ, ಮನೆಗಳಿಗೆ ಹೋಗಿ ಕುಣಿಯುತ್ತಾರೆ.ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ.ಜನ ಈ ಹುಲಿಗಳಿಗೆ ಹಣವನ್ನೂ ನೀಡುತ್ತಾರೆ ಈ ಹಣ ಹುಲಿಗಳ ಬಣ್ಣ ಹಾಗೂ ಇತರೆ ಖರ್ಚುಗಳಿಗೆ ಉಪಯೋಗವಾಗುತ್ತದೆ. ಇದನ್ನೂ ಓದಿ: ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ

ಈ ರೀತಿಯ ಹುಲಿ ವೇಷ (Tiger Dance) ಗಳ ತಂಡ ತುಳುನಾಡಿನಲ್ಲಿ ನೂರಾರು ಸಂಖ್ಯೆಯಲ್ಲಿರುತ್ತದೆ. ಸುಮಾರು 100 ಕ್ಕೂ ಅಧಿಕ ಹುಲಿಗಳು ಒಂದೊಂದು ತಂಡದಲ್ಲಿರುತ್ತದೆ. ಈ ಹುಲಿವೇಷಗಳ ತಂಡಗಳು ಫ್ರಾನ್ಸ್,ಜರ್ಮನಿ, ಅಮೇರಿಕ, ದುಬೈ, ಕತಾರ್ ಸೇರಿದಂತೆ ವಿದೇಶದ ಹಲವೆಡೆ ಪ್ರದರ್ಶನ ನೀಡಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಇಂತಹ ಸಂಪ್ರದಾಯ ಇಂದಿಗೂ ಉಳಿದಿರೋದು ದೇವಿಯ ಮಹಿಮೆಯೇ ಸರಿ ಎನ್ನುತ್ತಾರೆ ಇಲ್ಲಿನ ತುಳುವರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *