ಲಕ್ಷ್ಮಿ ದೇವಿ ಸೈಕಲ್, ಆನೆ ಮೇಲೆ ಬರುವುದಿಲ್ಲ, ಕಮಲದಲ್ಲಿ ಕುಳಿತು ಬರುತ್ತಾಳೆ: ರಾಜನಾಥ್ ಸಿಂಗ್

Public TV
1 Min Read

ಲಕ್ನೋ: ಲಕ್ಷ್ಮಿ ದೇವಿಯು ಎಂದೂ ಸೈಕಲ್ ಅಥವಾ ಆನೆಯ ಮೇಲೆ ಕುಳಿತು ಯಾರ ಮನೆಗೂ ಭೇಟಿ ನೀಡುವುದಿಲ್ಲ. ಹಾಗೆಯೇ ಆಕೆ ಯಾರತ್ತನೂ ತನ್ನ ಕೈ ಬೀಸುವುದಿಲ್ಲ. ಲಕ್ಷ್ಮಿ ಮಾತೆ ಕೇವಲ ಕಮಲದ ಮೇಲೆ ಕುಳಿತು ಬರುತ್ತಾಳೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಲಕ್ಷ್ಮಿ ದೇವಿಯು ಎಂದೂ ಸೈಕಲ್ ಅಥವಾ ಆನೆಯ ಮೇಲೆ ಕುಳಿತು ಯಾರ ಮನೆಗೂ ಭೇಟಿ ನೀಡುವುದಿಲ್ಲ. ಹಾಗೆಯೇ ಆಕೆ ಯಾರತ್ತಲೂ ತನ್ನ ಕೈ ಬೀಸುವುದಿಲ್ಲ. ಲಕ್ಷ್ಮಿ ಮಾತೆ ಕೇವಲ ಕಮಲದ ಮೇಲೆ ಕುಳಿತು ಬರುತ್ತಾಳೆ. ಈ ಮಾತನ್ನು ನೀವು ಒಪ್ಪುತ್ತೀರಲ್ಲವೇ ಎಂದು ಉತ್ತರ ಪ್ರದೇಶದ ಇತರೆ ಪಕ್ಷಗಳನ್ನು ಲೇವಡಿ ಮಾಡಿದ್ದಾರೆ.

ನಾವು ಕೇವಲ ಸರ್ಕಾರ ರಚನೆಗಾಗಿ ರಾಜಕೀಯ ಮಾಡುತ್ತಿಲ್ಲ. ನಾವು ಸಮಾಜ ಮತ್ತು ದೇಶವನ್ನು ಕಟ್ಟಲು ರಾಜಕೀಯ ಮಾಡುತ್ತೇವೆ. ಆದ್ದರಿಂದ ನಾವು ದೇಶದ ಒಳಿತಿಗಾಗಿ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಜನರಿಗೆ ದೊಡ್ಡ ಭರವಸೆಗಳನ್ನು ನೀಡುತ್ತವೆ. ಕಳೆದ 75 ವರ್ಷಗಳಲ್ಲಿ ಜನರ ಭರವಸೆಗಳನ್ನು ಈಡೇರಿಸಿದ್ದರೆ ಭಾರತ 10-20 ವರ್ಷಗಳ ಹಿಂದೆ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾಗಬಹುದಿತ್ತು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

ಬಿಜೆಪಿ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿದ ಸಚಿವ ರಾಜನಾಥ್ ಸಿಂಗ್, ಬಡವರಿಗೆ ವಾರ್ಷಿಕ 6,000 ರೂ. ಹಣ, ಉಚಿತ ಪಡಿತರ, ಹಲವಾರು ಜನರಿಗೆ ಉತ್ತಮವಾದ ಮನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *