ದೇವರು ನನ್ನನ್ನು ಕಾಪಾಡಿದ: ಹಂತಕನ ಗುಂಡೇಟಿನಿಂದ ಬಚಾವಾದ ಟ್ರಂಪ್‌ ಮಾತು

Public TV
1 Min Read

ವಾಷಿಂಗ್ಟನ್‌: ದೇವರು ನನ್ನನ್ನು ಕಾಪಾಡಿದ ಎಂದು ತಮ್ಮ ಹತ್ಯೆ ಯತ್ನದ ಕುರಿತು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದರು. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ದುಷ್ಕರ್ಮಿಯ ಗುಂಡೇಟಿನಿಂದ ಪೆಟ್ಟಾಗಿದ್ದ ಬಲ ಕಿವಿಯ ಮೇಲೆ ಬ್ಯಾಂಡೇಜ್ ಧರಿಸಿದ ಟ್ರಂಪ್ ಆಗಮಿಸಿದ್ದರು. ಗಾಡ್ ಬ್ಲೆಸ್ ಅಮೆರಿಕಾ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ‘ಯುಎಸ್‌ಎ, ಯುಎಸ್‌ಎ’ ಎಂಬ ಘೋಷಣೆಯೊಂದಿಗೆ ಟ್ರಂಪ್‌ ವೇದಿಕೆ ಪ್ರವೇಶಿಸಿದರು.

ಯುನೈಟೆಡ್‌ ಸ್ಟೇಟ್ಸ್‌ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. 4 ತಿಂಗಳಲ್ಲಿ ನಾವು ನಂಬಲಾಗದ ವಿಜಯವನ್ನು ಸಾಧಿಸುತ್ತೇವೆ. ಎಲ್ಲಾ ಧರ್ಮಗಳು, ಜನರು ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುತ್ತೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ರ‍್ಯಾಲಿಯಲ್ಲಿ ಹತ್ಯೆಯ ಪ್ರಯತ್ನದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತು ಪ್ರೀತಿ ತೋರಿದ ಅಮೆರಿಕದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇವರು ಇದ್ದುದರಿಂದ ನಾನು ಸುರಕ್ಷಿತವಾಗಿರುತ್ತೇನೆ. ಗುಂಡುಗಳು ನಮ್ಮ ಮೇಲೆ ಹಾರುತ್ತಿದ್ದವು. ಆದರೆ ಸಾರ್ವಜನಿಕರು ನನ್ನನ್ನು ಪ್ರೀತಿಸುತ್ತಾರೆ. ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ. ನಾನು ಈ ರಾಷ್ಟ್ರದ ಅಭಿವೃದ್ಧಿಗೆ ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Share This Article