ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗ

Public TV
2 Min Read

ಪಣಜಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‍ಗೆ ತೀವ್ರ ಹಿನ್ನಡೆ ಉಂಟಾಗಿದೆ. ಇದೀಗ ಪಂಚರಾಜ್ಯಗಳ ಪೈಕಿ ಒಂದಾಗಿರುವ ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗವಾಗಿದೆ.

 

ಕೊನೆಯ ಕ್ಷಣದ ವರೆಗೂ ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಅಂತಿಮ ಫಲಿತಾಂಶ ಕಂಡು ನಿರಾಸೆ ಅನುಭವಿಸಿದೆ. ಬಳಿಕ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಏನು ಎಂದು ಹುಡುಕಿದಾಗ ಕಾಂಗ್ರೆಸ್‍ನ ಜಯದ ಓಟಕ್ಕೆ ಬ್ರೇಕ್ ಹಾಕಿದ್ದು ಎಎಪಿ ಮತ್ತು ಟಿಎಂಸಿ ಎಂಬ ಅಸಲಿಯತ್ತು ಹೊರಬಿದ್ದಿದೆ. ಇದನ್ನೂ ಓದಿ: ಗೋವಾದಲ್ಲಿ ಅತಂತ್ರ ಫಲಿತಾಂಶ – ಕುದುರೆ ವ್ಯಾಪಾರಕ್ಕೆ ವೇದಿಕೆ ಸಜ್ಜು

ಅದಲ್ಲದೆ ಗೋವಾದಲ್ಲಿ ಜಾತ್ಯಾತೀತ ಮತಗಳ ವಿಭಜನೆಯಿಂದ ಕಾಂಗ್ರೆಸ್‍ಗೆ ಭಾರೀ ಪೆಟ್ಟು ಬಿದ್ದಿದೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್-ಎಎಪಿ, ಟಿಎಂಸಿ ಹೊಂದಾಣಿಕೆ ಮಾಡಿಕೊಳ್ಳಲು ಚರ್ಚೆ ನಡೆದಿತ್ತು. ಕೊನೆಯ ಘಳಿಗೆಯಲ್ಲಿ ಮೈತ್ರಿ ಮುರಿದು ಬಿದ್ದಿದ್ದರಿಂದ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡಲು ಮೂರು ಪಕ್ಷಗಳು ನಿರ್ಧರಿಸಿದ್ದವು ಇದು ಸೋಲಿಗೆ ಪ್ರಮುಖ ಕಾರಣವಾಗಿದೆ.

ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದು ಬಿದ್ದ ಬಳಿಕ ಟಿಎಂಸಿ ಪಕ್ಷ ಮಹಾರಾಷ್ಟ್ರ ಗೋಮಾಂತಕ ಪಾರ್ಟಿ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಇದು ಕಾಂಗ್ರೆಸ್‍ಗೆ ಹಿನ್ನಡೆ ಆಗುವಂತೆ ಮಾಡಿದೆ. ಟಿಎಂಸಿ ಸ್ಪರ್ಧೆ ಮಾಡಿದ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದೆ. ಈ ಎಲ್ಲಾ ಕಾರಣಗಳು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮನವರಿಕೆ ಆಗಿದ್ದು, ಸೋಲಿನ ಅಸಲಿ ಕಾರಣದ ವರದಿಯನ್ನು ಹೈಕಮಾಂಡ್‍ಗೆ ಸಲ್ಲಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ: 17 ರಾಜ್ಯಗಳಲ್ಲಿ ಬಿಜೆಪಿ, 2 ಕಡೆ ಕಾಂಗ್ರೆಸ್ – ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ? 

ಪಕ್ಷಗಳು ಪಡೆದ ಶೇಕಡಾವರು ಮತಗಳ ವಿವರ:
ಬಿಜೆಪಿ – 33.03%
ಕಾಂಗ್ರೆಸ್ – 23.5%
ಆಫ್ – 6.8%
ಎಂಎಜಿ + ಟಿಎಂಸಿ – 7.6%
ಪಕ್ಷೇತರರರು -28.08%

ಗೋವಾದ ಚುನಾವಣಾ ಫಲಿತಾಂಶವನ್ನು ಗಮನಹರಿಸಿದರೆ, ಕಾಂಗ್ರೆಸ್ – 11, ಬಿಜೆಪಿ – 20, ಎಎಪಿ – 02, ಎಂಜಿಪಿ – 02, ಟಿಎಂಸಿ – 00, ಜಿಎಫ್‍ಪಿ – 01, ಎನ್‍ಸಿಪಿ – 00, ಆರ್‌ಜಿಪಿ – 01, ಇತರರು – 03 ಸ್ಥಾನ ಗೆದ್ದುಕೊಂಡಿದೆ. ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಎಂಜಿಪಿ ಬೆಂಬಲ ಇದೆ. ಕಳೆದ ಬಾರಿ ಬಿಜೆಪಿ ಅಭಿವೃದ್ಧಿ ಕೆಲಸ ಕೈ ಹಿಡಿದಿದೆ. ಸಮರ್ಥ ಅಭ್ಯರ್ಥಿಗಳ ಆಯ್ಕೆ ಈ ಬಾರಿ ಮಾಡಲಾಗಿದೆ. ಕ್ಯಾಥೋಲಿಕ್ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ಗೆ ಸಮರ್ಥ ನಾಯಕತ್ವ, ಅಭ್ಯರ್ಥಿಗಳ ಕೊರತೆ ಕಾಡಿದೆ. ಕಾಂಗ್ರೆಸ್ ಮತ ಬ್ಯಾಂಕ್‍ಗೆ ಟಿಎಂಸಿ, ಎಎಪಿ ಕನ್ನ ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *