ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೈಭವಕ್ಕೆ ಇಂದು ಚಾಲನೆ

Public TV
2 Min Read

ಬೆಂಗಳೂರು: 13ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ ವರ್ಣರಂಜಿತವಾಗಿ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಬೊಮ್ಮಾಯಿ ಅವರು ದೀಪ ಬೆಳಗಿಸುವ ಮೂಲಕ ಚಲನಚಿತ್ರೋತ್ಸವಕ್ಕೆ ವೈಭವಕ್ಕೆ ಚಾಲನೆ ಕೊಟ್ಟರು. ಈ ವೇಳೆ ಸಿನಿಮಾ ಕುರಿತು ಮಾತನಾಡಿದ ಅವರು, ವೇದಿಕೆ ಮೇಲಿರುವ ಎಲ್ಲರೂ ಬಹಳ ಸಂತೋಷದಿಂದ ಚಾಲನೆ ನೀಡಿದ್ದೇವೆ. 1934 ಮಾರ್ಚ್ 03 ಅಂದರೆ ಇದೇ ದಿನ ಕನ್ನಡದ ‘ಸತಿ ಸುಲೋಚನಾ’ ಸಿನಿಮಾ ತೆರೆಕಂಡಿತು. ಈ ದಿನವನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ವೆಂದು ಘೋಷಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಇಷ್ಟು ಕಡಿಮೆ ಸಮಯದಲ್ಲಿ ಚಿತ್ರೋತ್ಸವ ಆಗಿದೆ. ಡಿಜಿಟಲ್ ವಲ್ರ್ಡ್ ನಿರ್ಮಾಣವಾಗಿದೆ. ಇಂದು ತಂತ್ರಜ್ಣಾನ ತುಂಬಾ ಮುಂದೆ ಬಂದಿದೆ. ಇಲ್ಲಿ ಯಾರು ಬಂದಿಲ್ಲದಿದ್ದರೂ ಬಂದಿದ್ದಾರೆ ಎಂದು 4ಡಿ ಮೂಲಕ ತೋರಿಸಬಹುದು. ಕನ್ನಡ ಚಿತ್ರರಂಗ ಉಳಿಯಬೇಕಾದಂತೆ ವಿಶೇಷ ಶ್ರಮವನ್ನು ನಾವು ಹಾಕಬೇಕಾಗುತ್ತೆ. ಸ್ಪೆಶಲ್ ಎಫೆಕ್ಟ್ ಜೊತೆಗೆ ಸ್ಪೆಷಲ್ ಎಫರ್ಟ್ ಬೇಕು. ಕನ್ನಡ ಉಳಿಸಲು ಸಿನಿಮಾಗಳ ಅಗತ್ಯವಿದೆ. ಹಲವು ಚಿತ್ರಂದಿರಗಳು ಮುಚ್ಚುತ್ತಿವೆ. ಅದಕ್ಕಾಗಿ ಹೊಸ ತಂತ್ರಜ್ಞಾನದ ಚಿತ್ರರಂಗ ದೊರೆಯಬೇಕು. ಕುಟುಂಬದವರು ಮತ್ತೆ ಒಟ್ಟಾಗಿ ಬಂದು ಸಿನಿಮಾ ನೋಡುವಂತೆ ಮಾಡಬೇಕು. ಇದಕ್ಕೆ ಸರ್ಕಾರ ಎಲ್ಲರೀತಿಯ ಸಹಕಾರ ನಿಡಲಿದೆ ಎಂದು ಭರವಸೆಯನ್ನು ನೀಡಿದರು. ಇದನ್ನೂ ಓದಿ: ‘ಕೊನೆಗೂ ಸಾಧಿಸಿದ್ವಿ’ – ರಷ್ಯಾ ಟ್ಯಾಂಕ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಉಕ್ರೇನಿ ಪ್ರಜೆಗಳು!

ಬೆಂಗಳೂರು ಚಲನಚಿತ್ರೋತ್ಸವ ನಂಬರ್ ಒನ್ ಆಗುವಂತೆ ಮಾಡಬೇಕು. ಸಾಮಾಜಿಕ ಸಂದೇಶ ಇರುವಂಥ ಸಿನಿಮಾಗಳನ್ನು ಮಾಡಬೇಕು. ಕಪ್ಪುಬಿಳುಪು ಸಿನಿಮಾಗಳಲ್ಲಿ ಸೃಜನಾತ್ಮಕತೆ ಅಪಾರ. ಇತ್ತೀಚೆಗೆ ಸ್ಪೆಷಲ್ ಎಫೆಕ್ಟ್ ತೋರಿಸಲು ಕಪ್ಪುಬಿಳುಪು ಬಳಸಲಾಗುತ್ತೆ. ಸಿನಿಮಾದವರು ಚಿತ್ರೋತ್ಸವ ನೋಡಬೇಕು ಎಂದು ಮನವಿ ಮಾಡಿದರು.

ಖ್ಯಾತ ನಟ ದಿ.ಪುನೀತ್ ರಾಜ್‍ಕುಮಾರ್ ಅವರನ್ನು ಈ ವೇಳೆ ಬೊಮ್ಮಾಯಿ ಅವರು ನೆನಪಿಸಿಕೊಂಡರು. ಪುನೀತ್ ಅವರು ಸಮಾಜಕ್ಕೆ ಮತ್ತು ಸಿನಿಮಾರಂಗಕ್ಕೆ ಕೊಟ್ಟ ಕೊಡುಗೆ ಎಂದು ಶಾಶ್ವತವಾಗಿ ಉಳಿಯುತ್ತವೆ. ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನಿಡಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಸಮಾರಂಭದ ದಿನಾಂಕ ಪ್ರಕಟಿಸಲಾಗುವುದು. ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಮುಂದಿನ ವರ್ಚ ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸೂಚಿಸಿದರು.

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ಸ್ಮಾರಕವಾಗಿ ಮಾಡಲು ಚಲನಚಿತ್ರ ಅಕಾಡೆಮಿಯ ಥಿಯೇಟರ್ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೊಮ್ಮಾಯಿ ನಿಮ್ಮ ಅವ್ವಾನೂ ಸೀರೆ ಸೆರಗು ಹಾಕ್ತಿದ್ಳೂ ಮರಾಯಾ, ಸೆರಗು ಇಲ್ಲದ ತಲೆ ತಲೆಯಲ್ಲ: ಇಬ್ರಾಹಿಂ ಕಿಡಿ

ಈ ಕಾರ್ಯಕ್ರಮಕ್ಕೆ ಸಚಿವ ಮುನಿರತ್ನ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಖ್ಯಾತ ನಟಿ ಭಾರತಿ, ಮಲೆಯಾಳಂ ಚಿತ್ರರಂಗದ ನಿರ್ದೇಶಕ ಪ್ರಿಯದರ್ಶನ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *