ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೂಡಲೇ ಸಂಬಳ ಬಿಡುಗಡೆ ಮಾಡಿ: ಹಾಲಪ್ಪ ಆಚಾರ್ ತರಾಟೆ

Public TV
1 Min Read

ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಗೆ ಕೂಡಲೇ ಸಂಬಳ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣಗೆ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ಹಾಗೂ ಮಳೆಹಾನಿ ಪರಿಹಾರ ಕುರಿತು ಇಂದು ಸಭೆ ನಡೆಯಿತು. ಈ ವೇಳೆ ಹಾಲಪ್ಪ ಅವರು ರಾಮಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅವರು, ಅಧಿಕಾರಿಗಳ ಸಭೆಯಲ್ಲಿ ಸಂಬಳ ನೀಡದೆ ಸಿಬ್ಬಂದಿಯನ್ನ ಸತಾಯಿಸಬೇಡಿ. ಕೋವಿಡ್ ಸಂದರ್ಭದಲ್ಲಿ ದುಡಿದವರಿಗೆ ಯಾಕೆ ಕಾಡಿಸುತ್ತೀರಿ. ಅವರನ್ನ ಕೆಲಸಕ್ಕೆ ತೆಗೆದುಕೊಂಡಿದ್ದೀರಿ, ದುಡಿಸಿಕೊಂಡಿದ್ದೀರಿ ಸಂಬಳ ಕೊಡಲು ಏನು ಕಷ್ಟ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಮತ್ತೆ ಮೇಕೆದಾಟು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

BRIBE

ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು ದುಡಿಸಿಕೊಂಡು ಸಂಬಳ ನೀಡದಿದ್ದರೆ ಹೇಗೆ ಎಂದು ಸಿಂಬ್ಬದಿಗಳ ಪರ ನಿಂತರು. ಈ ಕುರಿತು ಕೂಡಲೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ಮತ್ತು ರಾಜೇಂದ್ರನ್ ಅವರಿಗೆ ಸೂಚನೆ ನೀಡಿದ್ದಾರೆ.

ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಹಾಲಪ್ಪ ಆಚಾರ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *