ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ಕೊಡಿ: ರವಿಕುಮಾರ್

Public TV
1 Min Read

ಬೆಂಗಳೂರು/ಬೆಳಗಾವಿ: ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಸಿಎಂ ಸಿದ್ದರಾಮಯ್ಯ ಕೂಡಲೇ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಅಂತ ಬಿಜೆಪಿ ಸದಸ್ಯ ರವಿಕುಮಾರ್ (Ravi Kumar) ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ರವಿಕುಮಾರ್, ಬೆಂಗಳೂರಿನಲ್ಲಿ ಈಡಿಗ, ಬಿಲ್ಲವ ಸಮುದಾಯದ ಸಮಾವೇಶ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ನಾರಾಯಣಗುರು ನಿಗಮನಕ್ಕೆ 500 ಕೋಟಿ ಬಿಡುಗಡೆ ಮಾಡಿ ಅಂದರೆ ಅಧಿವೇಶನ ಇದೆ ಅಂತ ಹೇಳಿ ಘೋಷಣೆ ಮಾಡಿರಲಿಲ್ಲ. ಆದರೆ ಹುಬ್ಬಳ್ಳಿಯಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯ ಸಮಾವೇಶದಲ್ಲಿ 10 ಸಾವಿರ ಕೋಟಿ ಕೊಡೋದಾಗಿ ಘೋಷಣೆ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಘೋಷಣೆ ಮಾಡಿ ನಾರಾಯಣಗುರು ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡದೇ ಹೋದರೆ ಹೇಗೆ ಅಂತ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ (Siddaramaiah) ಅವರ ಈ ನಡೆ ಹಿಂದುಳಿದ ವರ್ಗಕ್ಕೆ ಮಾಡಿದ ಅಪಮಾನ, ಅನ್ಯಾಯ. ಇಂದು ಅಥವಾ ನಾಳೆ ಒಳಗೆ ಸದನದಲ್ಲಿ ನಾರಾಯಣಗುರು ನಿಗಮಕ್ಕೆ 500 ಕೋಟಿ ಘೋಷಣೆ ಮಾಡಬೇಕು ಅಂತ ಸಿಎಂ ಸಿದ್ದರಾಮಯ್ಯರನ್ನ ರವಿಕುಮಾರ್ ಒತ್ತಾಯ ಮಾಡಿದರು. ರವಿಕುಮಾರ್ ಆಗ್ರಹಕ್ಕೆ ಸಿಎಂ ಸಿದ್ದರಾಮಯ್ಯರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಬೋಸರಾಜು ತಿಳಿಸಿದರು. ಇದನ್ನೂ ಓದಿ: ಮೈಸೂರು ಕಾಗದ ಕಾರ್ಖಾನೆ ಮರುಪ್ರಾರಂಭಕ್ಕೆ ಕ್ರಮ: ಎಂಬಿ ಪಾಟೀಲ್

Share This Article