ಲಕ್ನೋ: ಯುವತಿಯೊಬ್ಬಳು ಚುಡಾಯಿಸಿದ ಯುವಕನಿಗೆ ಥಳಿಸುತ್ತಾ ಆಸ್ಪತ್ರೆಗೆ ಕರೆತಂದ ಘಟನೆ ಗುರುವಾರ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಯುವಕ ಸ್ಪೋಟ್ಸ್ ಡ್ರೆಸ್‍ನಲ್ಲಿ ಇದ್ದ ಯುವತಿಗೆ ಚುಡಾಯಿಸಲು ಪ್ರಯತ್ನಿಸಿದ್ದನು. ಈ ವೇಳೆ ಯುವತಿ ಆತನನ್ನು ಥಳಿಸಿದ್ದಾಳೆ. ಯುವತಿ ಬಾಕ್ಸಿಂಗ್ ಆಟಗಾರ್ತಿ ಆಗಿದ್ದು, ರೂಡ್ಕಿಯಲ್ಲಿ ಬಾಕ್ಸಿಂಗ್ ಕಲಿಯುತ್ತಿದ್ದಾಳೆ ಎಂಬುದು ತಿಳಿದು ಬಂದಿದೆ.
ತನ್ನ ತಾಯಿಯ ಆರೋಗ್ಯವನ್ನು ವೈದ್ಯರ ಬಳಿ ತೋರಿಸಲು ಯುವತಿ ಆಸ್ಪತ್ರೆಗೆ ಬಂದಿದ್ದಳು. ಬಳಿಕ ಒಡಿಪಿಯಲ್ಲಿ ಲೈನ್‍ನಲ್ಲಿ ನಿಂತಿದ್ದಾಗ ಯುವಕ ಆಕೆಯನ್ನು ಚುಡಾಯಿಸಲು ಯತ್ನಿಸಿದ್ದಾನೆ. ಇದನ್ನು ನೋಡಿದ ಯುವತಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ಯುವತಿ ಆತನನ್ನು ಹಿಗ್ಗಾಮುಗ್ಗಾ ಥಳಿಸುತ್ತಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಯುವಕನನ್ನು ಆಸ್ಪತ್ರೆ ಒಳಗೆ ಇದ್ದ ಪೊಲೀಸರಿಗೆ ಒಪ್ಪಿಸಿದ್ದಾಳೆ. ಅಲ್ಲದೆ ಈತ ನನ್ನನ್ನು ಚುಡಾಯಿಸುತ್ತಿದ್ದನು ಎಂದು ಯುವತಿ ಪೊಲೀಸರ ಬಳಿ ಆರೋಪಿಸಿದ್ದಾಳೆ.
ಪೊಲೀಸರ ವಶದಲ್ಲಿದ್ದ ಯುವಕ ಅವರನ್ನು ಯಾಮಾರಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಬಾಕ್ಸಿಂಗ್ ಆಟಗಾರ್ತಿ ಯುವಕ ಚುಡಾಯಿಸಿದ್ದಾನೆ ಎಂದು ಆತನನ್ನು ಥಳಿಸಿದ್ದಾರೆ. ಆದರೆ ಈ ಬಗ್ಗೆ ಅವರು ಯಾವುದೇ ದೂರು ನೀಡಿಲ್ಲ. ಈ ಬಗ್ಗೆ ದೂರು ಬಂದ್ರೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.