ಕಪ್ಪು ತುಂಡುಡುಗೆ ತೊಟ್ಟು ರೈಲಿನಲ್ಲಿ ಸೊಂಟ ಬಳುಕಿಸಿದ ಶ್ವೇತಸುಂದರಿ – ನೆಟ್ಟಿಗರಿಂದ ಫುಲ್‌ ಕ್ಲಾಸ್‌

Public TV
2 Min Read

– ಯುವತಿ ವಿರುದ್ಧ ನೆಟ್ಟಿಗರು ಆಕ್ರೋಶ, ಕ್ರಮಕ್ಕೆ ಒತ್ತಾಯ

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲೀಗ (Social Media) ರೀಲ್ಸ್‌ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ತುಂಡುಡುಗೆಗಳನ್ನು ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್‌ (Dance) ಮಾಡಿ ರೀಲ್ಸ್‌ ಕ್ರಿಯೇಟ್‌ ಮಾಡುವುದು ಟ್ರೆಂಡ್‌ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಇಂತಹ ದೃಶ್ಯಗಳು ದೆಹಲಿ ಮೆಟ್ರೋದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಅದೇ ರೀತಿಯ ಪ್ರಸಂಗ ಮುಂಬೈನ ಲೋಕಲ್‌ ಟ್ರೇನ್‌ನಲ್ಲಿಯೂ ಕಂಡುಬಂದಿದೆ.

ಮುಂಬೈನ ಸಾಮಾನ್ಯ ರೈಲಿನಲ್ಲಿ ಯುವತಿಯೊಬ್ಬಳು ಸಖತ್‌ ಹಾಟ್‌ ಉಡುಗೆ ತೊಟ್ಟು ಮನಬಂದಂತೆ ಕುಣಿದು ಕುಪ್ಪಳಿಸಿದ್ದಾಳೆ. ಹಿಂದಿ ಬೋಜ್‌ಪುರಿ ಗೀತೆಯೊಂದಕ್ಕೆ ಮೈಬಿಸಿ ಏರಿಸುವಂತೆ ನೃತ್ಯ ಮಾಡಿದ್ದಾಳೆ. ದೇಸಿ ಮೊಜಿತೋ ಎಂಬ ಎಕ್ಸ್‌ ಖಾತೆಯಲ್ಲಿ ಫೆ.23 ರಂದು ಯುವತಿ ನೃತ್ಯ ಮಾಡಿದ ವೀಡಿಯೋ ಹಂಚಿಕೊಂಡ ನಂತರ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ರೈಲ್ವೆ ಷೇರುಗಳು ಏಕೆ ಗಗನಕ್ಕೇರುತ್ತಿವೆ ಅನ್ನೋದು ಈಗ ಗೊತ್ತಾಗ್ತಿದೆ ಎಂದು ಖಾತೆದಾರರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮದುವೆಯಾಗುವುದಾಗಿ 13 ವರ್ಷಗಳ ಕಾಲ ನಿರಂತರ ಅತ್ಯಾಚಾರ ಆರೋಪ – ನಟ ಮನೋಜ್ ರಜಪೂತ್ ಅರೆಸ್ಟ್

ಯುವತಿಯ ವೀಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ದಯವಿಟ್ಟು ಈ ವಿಷಯ ಗಮನಿಸಿ, ಈ ಮಹಿಳೆ ರೈಲ್ವೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕ್ಯಾಮೆರಾ ಇದೆ ಎಂಬ ಅರಿವೂ ಇಲ್ಲದೇ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಂಬೈ ರೈಲ್ವೆ ಪೊಲೀಸ್‌ ಕಮಿಷನರೇಟ್ ಘಟಕವು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಭದ್ರತಾ ವಿಭಾಗಕ್ಕೆ ಸೂಚಿಸಿದೆ. ಇದನ್ನೂ ಓದಿ: 3 ವರ್ಷಗಳಿಂದ ವರ್ಗಾವಣೆಯಾಗಿಲ್ಲ; ಪೊಲೀಸರಿಂದಲೇ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ!

ಈ ಹಿಂದೆ ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಬಿಕಿನಿ ತೊಟ್ಟು ಸಂಚರಿಸಿದ್ದಾಗ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಎಚ್ಚರಿಕೆ ನೀಡಿತ್ತು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇದನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು. ಇದೀಗ ಮುಂಬೈ ರೈಲಿನಲ್ಲೂ ಅಂತಹದ್ದೇ ಘಟನೆ ಕಂಡುಬಂದಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೆಇಎ ಪ್ರಶ್ನೆಪತ್ರಿಕೆ ಲೀಕ್ ಮಾಡಲು 40 ಲಕ್ಷ ನೀಡಿದ ಆರೋಪ – ಸರ್ಕಾರಿ ಕೆಲಸಕ್ಕೆ ಸೇರಿ ತಿಂಗಳಲ್ಲೇ ಹಾಸ್ಟೆಲ್ ವಾರ್ಡನ್ ಜೈಲುಪಾಲು

Share This Article