ಕೋಲಾರ: ಬಾಲಕಿಯೊಬ್ಬಳ ಮೇಲೆ ನಿರಂತರ ಪ್ರತ್ಯೇಕವಾಗಿ 6 ಜನ ಅತ್ಯಾಚಾರವೆಸಗಿರುವುದು ಕೋಲಾರ (Kolar) ಜಿಲ್ಲೆಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ರಾಹುಲ್, ನಾಗೇಶ್ ಹಾಗೂ ಪುನೀತ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಚೇತನ್, ಕಿರಣ್, ಮಹೇಂದ್ರಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತೆಗೆ ಗುಂಡು ಹಾರಿಸಿದ ರೇಪ್ ಆರೋಪಿ
ಬಾಲಕಿ ನೀಡಿದ ಹೇಳಿಕೆ ಆಧರಿಸಿ ಆರು ಜನರ ವಿರುದ್ದ ಜು.18 ರಂದು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್ ಅಂತ ಪತ್ತೆಹಚ್ಚಿದ್ದೇ ಹೊಸ ತಂತ್ರಜ್ಞಾನ – ದೇಶದಲ್ಲೇ ಮೊದಲ ಪ್ರಯೋಗ