Mandya | ಕೇಕ್‌ ಕೊಡಿಸಿ, ಚಾಕು ಹಾಕುವುದಾಗಿ ಬೆದರಿಸಿ ಬಾಲಕಿ ಮೇಲೆ ಗ್ಯಾಂಗ್‌ ರೇಪ್

Public TV
1 Min Read

ಮಂಡ್ಯ: ಕೇಕ್ ಕೊಡಿಸಿ, ಚಾಕು ಹಾಕುವುದಾಗಿ ಬೆದರಿಸಿ ಸರ್ಕಾರಿ ಶಾಲಾ ಆವರಣದಲ್ಲೇ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಂಡ್ಯ (Mandya) ನಗರದ ಹೊರ ವಲಯದಲ್ಲಿ ನಡೆದಿದೆ.

ಹಾಡುಹಗಲೇ ಮೂವರು ಕಾಮುಕರು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಜ.31ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಋತುಮತಿಯಾಗಿ ಎರಡು ದಿನ ಕಳೆದರೂ ಹೊಟ್ಟೆ ನಾವು, ರಕ್ತಸ್ರಾವ ನಿಲ್ಲದ ಹಿನ್ನೆಲೆ ಬಾಲಕಿ ಚಿಕ್ಕಮ್ಮ ಬಂದು ವಿಚಾರಿಸಿದಾಗ ಘಟನೆ ಬಯಲಿಗೆ ಬಂದಿದೆ. ಚಿಕ್ಕಮ್ಮನ ಬಳಿ ಕಾಮಾಂಧರ ದುಷ್ಕೃತ್ಯದ ಬಗ್ಗೆ ಬಾಲಕಿ ಬಾಯಿಬಿಟ್ಟಿದ್ದಾಳೆ. ಇದನ್ನೂ ಓದಿ: ದರ್ಶನ್‌-ಪ್ರೇಮ್‌ ಸಿನಿಮಾ ಮಾಡೇ ಮಾಡ್ತಾರೆ – ರಕ್ಷಿತಾ

ಸದ್ಯ ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬಂದ ಪೊಲೀಸರು ಬಾಲಕಿಯ ಆರೋಗ್ಯ ವಿಚಾರಣೆ ನಡೆಸಿದ್ದಾರೆ. ನಂತರ ಬಾಲಕಿಯ ಆರೋಗ್ಯದ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ:  Kolar | ಶೆಡ್‌ಗೆ ಆಕಸ್ಮಿಕ ಬೆಂಕಿ – 4 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಭಸ್ಮ

Share This Article