ಬೆಂಗಳೂರು: ನೀರಿನ ಟ್ಯಾಂಕರ್ (Water Tanker) ಹರಿದು ಒಂಬತ್ತು ವರ್ಷದ ಬಾಲಕಿ (Girl) ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಹೆಚ್‌ಎಎಲ್‌ನಲ್ಲಿ ನಡೆದಿದೆ.
ಕಲಬುರಗಿ (Kalaburagi) ಮೂಲದ ದಂಪತಿಯ ಮಗಳು ಅನುಶ್ರೀ ಸಾವನ್ನಪ್ಪಿದ ಬಾಲಕಿ. ಹೆಚ್‌ಎಎಲ್ ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕಟ್ಟಡವೊಂದಕ್ಕೆ ವಾಟರ್ ಸಪ್ಲೈಗೆ ಟ್ಯಾಂಕರ್ ಬಂದಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಆಟ ಆಡುತ್ತಿದ್ದ ಬಾಲಕಿಯನ್ನು ನೋಡದೆ ಟ್ಯಾಂಕರ್ ಚಾಲಕ ವಾಹನ ಚಲಾಯಿಸಿದ ಪರಿಣಾಮ ಕೆಳಗೆ ಕೆಳಗೆ ಬಿದ್ದ ಬಾಲಕಿ ಮೇಲೆ ಟ್ಯಾಂಕರ್ ಹರಿದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: Bihar Elections | 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಡಿಯು
ಸದ್ಯ ಬಾಲಕಿಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜೀವನ್ ಭೀಮನಗರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ