ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಯುವತಿ ಜಲಸಮಾಧಿ!

Public TV
1 Min Read

ಚಾಮರಾಜನಗರ: ನೀರಿನಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಯುವತಿಯೊಬ್ಬಳು ಜಲ ಸಮಾಧಿಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಯರಂಬಾಡಿ ಜಲಾಶಯದಲ್ಲಿ ನಡೆದಿದೆ.

ನಿಖಿತಾ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಜಲಸಮಾಧಿಯಾದ ಯುವತಿ. ಮೂಲತಃ ಬೆಂಗಳೂರಿನವರಾಗಿದ್ದು, ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ವೇಳೆ ಈ ಘಟನೆ ಸಂಭವಿಸಿದೆ. ನಿಖಿತಾ ಸ್ನೇಹಿತೆ ಕಾಲು ಜಾರಿಗೆ ಜಲಾಶಯಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ನಿಖಿತಾ ನೀರಿಗೆ ಧುಮುಕಿ ತನ್ನ ಸ್ನೇಹಿತೆಯನ್ನು ಪಾರು ಮಾಡಲು ಯತ್ನಿಸಿದ್ದಾರೆ.

ಈ ವೇಳೆ ದುರಾದೃಷ್ಟವಶಾತ್ ಡ್ಯಾಂ ನಲ್ಲಿ ಸುಳಿ ಇದ್ದ ಕಾರಣ ನಿಖಿತಾ ನೀರಿನಲ್ಲಿ ಜಲ ಸಮಾಧಿಯಾಗಿದ್ದು, ಕೂಡಲೇ ಸ್ನೇಹಿತೆ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ನಿಖಿತಾ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದಿದ್ದು, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *