ತಿರುವನಂತಪುರಂ: ಶಾಲೆಯಿಂದ ವಾಪ್ಸಾಗುತ್ತಿದ್ದ ಪುಟ್ಟ ಕಂದಮ್ಮನಿಗೆ ಮನೆ ಮುಂದೆಯೇ ಶಾಲಾ ಬಸ್ (School Bus) ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟ ಘಟನೆ ಕೇರಳದಲ್ಲಿ (Kerala) ನಡೆದಿದೆ.
ಬಾಲಕಿಯನ್ನು ದಿಯಾ (8) ಎಂದು ಗುರುತಿಸಲಾಗಿದೆ. ಈಕೆ ತಲಕ್ಕೊಟ್ಟುಕರದ ಒಐಇಟಿ ಪಬ್ಲಿಕ್ ಸ್ಕೂಲ್‍ನಲ್ಲಿ 2ನೇ ತರಗತಿ ಓದುತ್ತಿದ್ದಾಳೆ. ಈ ಘಟನೆ ವೇಲೂರು (Velur) ಎಂಬಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಇದನ್ನೂ ಓದಿ: ಮಗುವಿನೊಂದಿಗೆ ಪ್ರಿಯಕರನ ಜೊತೆ ಪತ್ನಿ ವಾಸ- ರೊಚ್ಚಿಗೆದ್ದ ಪತಿ ಕೊಂದೇ ಬಿಟ್ಟ!
ಪ್ರತಿನಿತ್ಯದಂತೆ ದಿಯಾ ನಿನ್ನೆ ಕೂಡ ಸಂಜೆ ಶಾಲಾ ಬಸ್‍ನಿಂದ ಇಳಿದು ರಸ್ತೆ ದಾಟುತ್ತಿದ್ದಳು. ಆದರೆ ಈಕೆ ರಸ್ತೆ ದಾಟುತ್ತಿರುವುದನ್ನು ಗಮನಿಸಿದ ಡ್ರೈವರ್ ಏಕಾಏಕಿ ಬಸ್ ಚಲಾಯಿಸಿದ್ದಾನೆ. ಪರಿಣಾಮ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದಿದ್ದರಿಂದ ಬಾಲಕಿ ಗಾಯಗೊಂಡಿದ್ದು, ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ.
Web Stories