ಶಿವಮೊಗ್ಗ: ವಿವಾಹಿತನ ಪ್ರೀತಿ ಮಾಡಿದ ತಪ್ಪಿಗೆ ಯುವತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.
ಮೂಲತಃ ದಾವಣಗೆರೆಯ ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸಿಂಗ್ ಓದುತ್ತಿದ್ದಳು. ಶಿಕಾರಿಪುರದಲ್ಲಿದ್ದ ಸಂಬಂಧಿಗಳ ಮನೆಗೆ ಹೋದಾಗ ಪರಿಚಯ ಆದ ಗೋಣಿ ಸಂದೀಪ ಎಂಬಾತನ ಜೊತೆ ಲವ್ ಶುರು ಆಗಿತ್ತು.
ಮದುವೆ ಆಗಿ ಇಬ್ಬರು ಮಕ್ಕಳಿದ್ದ ಸಂದೀಪ ಈ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಇವಳನ್ನು ಬಳಸಿಕೊಂಡದ್ದ. ಮೂರು ದಿನಗಳ ಹಿಂದೆ ಶಿಕಾರಿಪುರದ ರಾಜಲಕ್ಷ್ಮಿಲಾಡ್ಜ್ ನಲ್ಲಿ ರೂಮ್ ಮಾಡಿ ಅವಳ ಜೊತೆ ಇದ್ದ.
ಗುರುವಾರ ಸಂಜೆ ಮದುವೆ ವಿಷಯದ ಬಗ್ಗೆ ಇಬ್ಬರಿಗೂ ವಾಗ್ವಾದ ನಡೆದಿದೆ. ಸಂದೀಪ ಲಾಡ್ಜ್ ಕೊಠಡಿಯಿಂದ ಹೊರ ಹೋದ ನಂತರ ಸಂಧ್ಯಾ ಅದೇ ಕೊಠಡಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯ ನಂತರ ಗೋಣಿ ಸಂದೀಪ್ ತಲೆ ಮರೆಸಿಕೊಂಡಿದ್ದಾನೆ. ಶಿಕಾರಿಪುರದ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.