ಖ್ಯಾತ ಹಾಸ್ಯನಟನಿಗೆ ‘ಯುವತಿ’ಯಿಂದ ಸೆಕ್ಸ್ ದೋಖಾ!

Public TV
1 Min Read

ಮಂಗಳೂರು: ತುಳು ಚಲನಚಿತ್ರ ರಂಗದ ಹಾಸ್ಯನಟರೊಬ್ಬರಿಗೆ ಬೆಂಗಳೂರಿನ ಇಬ್ಬರು ಆರೋಪಿಗಳು ಯುವತಿ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಮಂಗಳೂರಿನ ಪೊಲೀಸರು ಬೆಂಗಳೂರಿನ ಯಶವಂತಪುರ ನಿವಾಸಿ ಆದಿತ್ಯ ಮತ್ತು ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ಅರುಣ್ ಎಚ್.ಎಸ್‍ನನ್ನು ಬಂಧಿಸಿದ್ದಾರೆ. ಫೇಸ್ ಬುಕ್ಕಿನಲ್ಲಿ ಆರಾಧ್ಯ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ ಆದಿತ್ಯ, ಮಂಗಳೂರಿನ 25ರ ಹರೆಯದ ಹಾಸ್ಯನಟನನ್ನು ವಂಚಿಸಿದ್ದಾನೆ.

ಸಲುಗೆಯ ಮಾತನಾಡಿ ಬಳಿಕ ಚಿತ್ರನಟ, ತನ್ನ ಅರೆನಗ್ನ ಫೋಟೋವನ್ನು ಯುವತಿ ಅಶ್ವಿನಿ ಅಲಿಯಾಸ್ ಆರಾಧ್ಯಗೆ ಸೆಂಡ್ ಮಾಡಿದ್ದರು. ಈ ಫೋಟೋ ಪಡೆದ ಯುವಕ ಆರಾಧ್ಯ, ಚಿತ್ರನಟನನ್ನು ಬ್ಲಾಕ್ ಮೇಲ್ ಮಾಡಿದ್ದು ಬಳಿಕಸ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡು 65 ಸಾವಿರ ರೂ. ವಸೂಲಿ ಮಾಡಿದ್ದಾನೆ.

ಆ ನಂತರ ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಾಗ ವ್ಯಕ್ತಿ ಪೊಲೀಸ್ ದೂರು ನೀಡಿದ್ದರು. ತನಿಖಾ ಹಂತದಲ್ಲಿ ಕಮಿಷನರ್ ಹೆಸರಲ್ಲಿ ಮತ್ತು ಗೃಹಮಂತ್ರಿ ಪಿಎ ಹೆಸರಿನಲ್ಲೂ ಫೋನ್ ಕರೆ ಮಾಡಿ ಆರೋಪಿಗಳು ವ್ಯಕ್ತಿಯನ್ನು ಬೆದರಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಮಂಗಳೂರಿನ ಉರ್ವ ಠಾಣೆ ಪೊಲೀಸ್ ಅಧಿಕಾರಿಯಾದ ರವೀಶ್ ನಾಯ್ಕ್ ನೇತೃತ್ವದ ತಂಡ, ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಆದಿತ್ಯ 19ರ ಹರೆಯದ ಪಿಯುಸಿ ವಿದ್ಯಾರ್ಥಿ ಆಗಿದ್ದು ಅಶ್ವಿನಿ ಅಲಿಯಾಸ್ ಆರಾಧ್ಯ ಹೆಸರಿನಲ್ಲಿ ಹಲವರನ್ನು ಬ್ಲಾಕ್ ಮೇಲ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಈತ ಹಲವು ಮಂದಿಗೆ ಇದೇ ರೀತಿ ಮಾಡಿ ವಂಚಿಸಿದ್ದು, ಈ ಬಗ್ಗೆ ಯಾರು ಕೂಡ ದೂರು ನೀಡಿರಲಿಲ್ಲ. ಮನೆಯಲ್ಲಿ ಹುಡುಗನ ವೇಷದಲ್ಲಿರುವ ಈತ ಹೊರಗೆ ಹುಡುಗಿಯ ಥರ ಡ್ರೆಸ್ ಮಾಡಿಕೊಂಡು ವಂಚಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *