ಉಡುಪಿ: ಬಹಳ ದಿನಗಳಿಂದ ಚುಡಾಯಿಸುತ್ತಿದ್ದ ಯುವಕನಿಗೆ ಯುವತಿಯೇ ಗೂಸಾ ನೀಡಿರುವ ಘಟನೆ ಜಿಲ್ಲೆಯ ಕಾಪು ಪೇಟೆಯಲ್ಲಿ ನಡೆದಿದೆ.
ಯುವತಿಗೆ ಕಾಮುಕ ಯುವಕನಿಗೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಲೇಮಾನ್ ಯುವಕ ಚುಡಾಯಿಸಿದ್ದು, ಆರೋಪಿ ಸ್ಥಳೀಯ ಯುವತಿಗೆ ತುಂಬಾ ದಿನದಿಂದ ಕೀಟಲೆ ಮಾಡುತ್ತಿದ್ದನು. ಇದರಿಂದ ಕೋಪಗೊಂಡ ಯುವತಿ ಇಂದು ಆತನಿಗೆ ಚಪ್ಪಲಿಯಲ್ಲಿ ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾಳೆ.
ಯುವಕನನ್ನು ಯುವತಿ ರಸ್ತೆಯಲ್ಲಿಯೇ ಕೆಳಗೆ ಕೆಡವಿ ಕಾಲಿನಿಂದ ಒದ್ದಿದ್ದಾಳೆ. ಬಳಿಕ ಕಾಲಿದ್ದ ಚಪ್ಪಲಿ ತೆಗೆದು ಹಿಗ್ಗಮುಗ್ಗಾ ಬಾರಿಸಿದ್ದಾಳೆ. ಸುತ್ತುವರಿದಿದ್ದ ಜನರು ಸುಮ್ಮನೆ ನೋಡುತ್ತಾ ನಿಂತಿದ್ದರು. ನಂತರ ಅವರು ಬಂದು ಸುಲೇಮಾನ್ ಗೆ ಥಳಿಸಿದ್ದಾರೆ. ಇದೆಲ್ಲವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಈಗ ಆ ವಿಡಿಯೋ ವೈರಲ್ ಆಗುತ್ತಿದೆ.
ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದು, ಬಳಿಕ ಸುಲೇಮಾನ್ ನ ತಾಯಿಯನ್ನು ಅಲ್ಲಿಗೆ ಕರೆದು ವಿಚಾರಿಸಿದಾಗ, ಈತನಿಗೆ ಇದು ಹಳೇ ಚಾಳಿ ಹಾಗೂ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹಾಗಾಗಿ ಯಾವುದೇ ದೂರು ದಾಖಲಿಸದೆ ಸುಲೇಮಾನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv