ಶಿವಮೊಗ್ಗ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಅಶ್ಲೀಲ ವೀಡಿಯೋವನ್ನು ಹರಿಬಿಟ್ಟ ಕಿರಾತಕರನ್ನು ಬಂಧಿಸಿರುವ ಘಟನೆ ನಗರದಲ್ಲಿ ವರದಿಯಾಗಿದೆ.
17 ವರ್ಷದ ಅಪ್ರಾಪ್ತ ಬಾಲಕಿಯೋರ್ವಳು ತನ್ನ ಸ್ವಗ್ರಾಮಕ್ಕೆ ತೆರಳಲು ಜಿಲ್ಲೆಯ ಹೊಸನಗರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಳು. ಬಸ್ ನಿಲ್ದಾಣದ ಬಳಿ ಬಂದ ಇಬ್ಬರು ಪರಿಚಿತ ಯುವಕರಾದ ಸಂತೋಷ್ ಹಾಗೂ ಸುನೀಲ್ ಎಂಬ ಇಬ್ಬರು, ನಾವು ನಿಮ್ಮ ಗ್ರಾಮದ ಕಡೆ ಹೋಗುತ್ತಿದ್ದೇವೆ. ಊರಿಗೆ ಬಿಡುತ್ತೇವೆ ಬಾ ಎಂದು ಬಾಲಕಿಯನ್ನು ನಂಬಿಸಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಕಾರಿನಲ್ಲಿ ಕೂರಿಸಿಕೊಂಡ ಇಬ್ಬರು ಯುವಕರು ಬಾಲಕಿಯನ್ನು ಆಕೆಯ ಗ್ರಾಮಕ್ಕೆ ಬಿಡದೇ, ತಮ್ಮ ರೂಮ್‍ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಈ ಕಾಮುಕರು ಅತ್ಯಾಚಾರ ನಡೆಸುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಜೂಜು, ಕುಡಿತ ಚಟಕ್ಕೆ ಬಿದ್ದು ಮನೆ ಮಾರೋಕೆ ಮುಂದಾಗಿ ತಾಯಿ, ಅಕ್ಕನಿಂದಲೇ ಕೊಲೆಯಾದ
ಕೆಲ ದಿನಗಳ ಬಳಿಕ ಈ ಇಬ್ಬರು ಕಾಮುಕರು ಮತ್ತೆ ಬಾಲಕಿಯನ್ನು ರೂಮ್‍ಗೆ ಕರೆದಿದ್ದಾರೆ. ಬಾಲಕಿ ಕಾಮುಕರ ಮಾತನ್ನು ನಿರಾಕರಿಸಿದ್ದಕ್ಕೆ, ಇಬ್ಬರು ಕಿರಾತಕರು ಸೇರಿಕೊಂಡು ಬಾಲಕಿಯ ಅಶ್ಲೀಲ ವೀಡಿಯೋವನ್ನು ರಾಘವೇಂದ್ರ, ಸಚಿನ್ ಹಾಗೂ ಸುಬ್ಬು ಎಂಬುವರ ಮೊಬೈಲ್‍ಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ಈ ಅಶ್ಲೀಲ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ
ವಿಡಿಯೋ ವೈರಲ್ ಆಗಿದ್ದರಿಂದ ಮನನೊಂದ ಬಾಲಕಿ ಹಾಗೂ ಆಕೆಯ ಪೋಷಕರು ಆರೋಪಿಗಳಾದ ಸಂತೋಷ್ (24) ಹಾಗೂ ಸುನೀಲ್ (26) ವಿರುದ್ಧ ಹೊಸನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾಮುಕರಾದ ಸಂತೋಷ್ ಮತ್ತು ಸುನೀಲ್‍ನನ್ನು ವಶಕ್ಕೆ ಪಡೆದಿದ್ದಾರೆ.